ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲಚಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದಾರೆ. ಈ ವಿವಾದ ತೀವ್ರಸ್ವರೂಪದ ಪಡೆದಿದೆ. ಈ ನಡುವೆಯೇ ನಯನತಾರಾ ಸೋಮವಾರ (ನ.18) 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ‘ಬಿಯಾಂಡ್ ದ ಫೈರಿಟೇಲ್’ ರಿಲೀಸ್ ಆಗಿದೆ. ಹೊಸ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಘೋಷಣೆಯಾಗಿದೆ. ಚಿತ್ರದ ಹೆಸರು ‘ರಕ್ಕಾಯಿ’. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸೆಂಥಿಲ್ ನಲ್ಲಸ್ವಾಮಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಹಳ್ಳಿ ಲುಕ್‌ನಲ್ಲಿ ಕೈಯಲ್ಲಿ ಕೊಡಲಿ ಹಿಡಿದು ರೆಬೆಲ್ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದು, ‘ನ್ಯಾಯವೇ ಇಲ್ಲದ ನಾಡಿನಲ್ಲಿ ಒಬ್ಬ ತಾಯಿ ವಾಸಿಸುತ್ತಿದ್ದಳು. ಅವಳ ಪ್ರಪಂಚವೇ ತನ್ನ ಮಗುವಾಗಿತ್ತು. ಆದರೆ, ಮಗುವಿನ ಜೀವಕ್ಕೆ ಬೆದರಿಕೆ ಬಂದಾಗ, ಆಕೆ ಓಡುವುದಿಲ್ಲ. ಬದಲಾಗಿ ಯುದ್ಧ ಘೋಷಿಸುತ್ತಾಳೆ’ ಎಂದು ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ‘ರಕ್ಕಾಯಿ’ ಜತೆಗೆ ‘ಮಣ್ಣನ್‌ಗಟ್ಟಿ 1960’, ‘ತನಿ ಒರುವನ್-2’, ‘ಡಿಯರ್ ಸ್ಟೂಡೆಂಟ್ಸ್’ ಚಿತ್ರಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. -ಏಜೆನ್ಸೀಸ್
‘ರಕ್ಕಾಯಿ’ ನಯನತಾರಾ: ನಟಿಯ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಟೀಸರ್ ಉಡುಗೊರೆ
You Might Also Like
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…