

ಮುಂಬೈ: ರಾಖಿ ಸಾವಂತ್ಗೆ ಬಾಲಿವುಡ್ನಲ್ಲಿ 'ಡ್ರಾಮಾ ಕ್ವೀನ್' ಅಂತ ಕರೆಯುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ರಾಖಿಗೆ ಇಂಥದ್ದೊಂದು ಹೆಸರು ಬರಲು ಕಾರಣ, ಆಕೆಯ ಪ್ರಚಾರಪ್ರಿಯತೆ. ಕ್ಯಾಮೆರಾ ಕಂಡರೆ ಏನಾದರೊಂದು ಡ್ರಾಮಾ ಮಾಡಿ ಪ್ರಚಾರ ಗಿಟ್ಟಿಸುವುದು ರಾಖಿಯ ಹಳೆಯ ಚಾಳಿ. ಈಗ ಅವರು ಮತ್ತೊಮ್ಮೆ ಅಂಥದ್ದೇ ಒಂದು ಡ್ರಾಮಾ ಮಾಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಬಾಜಿರಾವ್ ಮಸ್ತಾನಿ' ಚಿತ್ರದ ಅತ್ಯಂತ ಜನಪ್ರಿಯ ಹಾಡು 'ದೀವಾನಿ ಮಸ್ತಾನಿ'. ಈ ಹಾಡಿನಲ್ಲಿ ವಿಶೇಷವಾದ ಕಾಸ್ಟ್ಯೂಮ್ ತೊಟ್ಟಿದ್ದರು ದೀಪಿಕಾ ಪಡುಕೋಣೆ. ಶುಕ್ರವಾರ ರಾತ್ರಿ ಅಂಥದ್ದೇ ಒಂದು ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡ ರಾಖಿ, ಮುಂಬೈನ ಬೀದಿಗಳಲ್ಲಿ ಅದೇ 'ದೀವಾನಿ ಮಸ್ತಾನಿ' ಹಾಡುವುದರ ಜತೆಗೆ, ತಮ್ಮ ಬಾಜಿರಾವ್ನನ್ನು ಹುಡುಕಾಡಿದ್ದಾರೆ.
ಅಷ್ಟೇ ಅಲ್ಲ, ಜನಪ್ರಿಯ ನೃತ್ಯ ಕಾರ್ಯಕ್ರಮ 'ನಚ್ ಬಲಿಯೇ'ದಲ್ಲಿ ಅವಕಾಶ ಸಿಕ್ಕರೆ, ತನ್ನ ಗಂಡ (ರಿತೇಶ್) ಜತೆಗೆ ಭಾಗವಹಿಸುವುದಾಗಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಜತೆಗೆ, ಅಲ್ಲೇ ಓಡಾಡುತ್ತಿದ್ದ ಒಬ್ಬ ಡಬ್ಬಾವಾಲಾನನ್ನು ತಡೆದು, ನೀನೇ ನನ್ನ ಬಾಜಿರಾಯ ಎಂದು ಹಾಡಿದ್ದಾರೆ.
ರಾಖಿ ಇಷ್ಟೆಲ್ಲಾ ಮಾಡಿದ್ದು ಪ್ರಚಾರಕ್ಕೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ರಾಖಿ ಮನೆಯ ಹತ್ತಿರ ಪಾಪರಾಜಿಗಳು ನೆರೆದಿರುತ್ತಾರಂತೆ. ರಾಖಿ ಹೋದಲ್ಲಿ ಬಂದಲ್ಲಿ ಅವರನ್ನು ಡೆದು ಮಾತನಾಡಿಸುತ್ತಾರಂತೆ. ಪಾಪರಾಜಿಗಳ ಮುಂದೆ ನಾಟಕ ಮಾಡಿದರೆ ಒಂದಿಷ್ಟ ಪ್ರಚಾರ ಗ್ಯಾರಂಟಿ ಎಂದು ಅರ್ಥ ಮಾಡಿಕೊಂಡಿರುವ ರಾಕಿ, ಮಸ್ತಾನಿ ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಖಿಯ ಈ ನಾಟಕವನ್ನು ತಮ್ಮ ಕ್ಯಾಮೆರಾಗಳ ಮೂಲಕ ಸೆರೆಹಿಡಿದಿರುವ ಪಾಪರಾಜಿಗಳು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಏನೂ ಮಾಡದಿದ್ದರೂ, ಸುಮ್ಮನೆ ಪ್ರಚಾರ ಪಡೆಯುವುದು ಹೇಗೆಂದು ರಾಖಿ ನೋಡಿ ಕಲಿಯಬೇಕು ಎಂದು ಬಾಲಿವುಡ್ ಮಂದಿ ಸುಮ್ಮನೆ ಹೇಳುವುದಿಲ್ಲ.