ಸಿನಿಮಾ

ಪತಿ ನನ್ನ ಹತ್ಯೆ ಮಾಡಲು ಸುಪಾರಿ ನೀಡಿದ್ದಾನೆ: ರಾಖಿ ಸಾವಂತ್ ಆರೋಪ

ಮುಂಬೈ: ನಟಿ ರಾಖಿ ಸಾವಂತ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ. ಈಕೆ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರವಾಗಿಯೇ ಸದಾ ಸುದ್ದಿಯಾಗುತ್ತಾರೆ. ಇದೀಗ ಪತಿ ಆದಿಲ್ ಖಾನ್ ದುರಾನಿ ಜೈಲಿನಿಂದಲೇ ನನ್ನ ಕೊಲ್ಲಲು ಯೋಜನೆ ರೂಪಿಸಿದ್ದಾನೆ ಎಂದು ನಟಿ ರಾಖಿ ಸಾವಂತ್ ಆರೋಪ ಮಾಡಿದ್ದಾರೆ.

ಜೈಲಿನಲ್ಲಿರುವ ತನ್ನ ಪತಿ ಆದಿಲ್ ಖಾನ್ ದುರಾನಿ ತನ್ನನ್ನು ಹತ್ಯೆ ಮಾಡಲು “ಕೊಲೆಗಾರನಿಗೆ ಗುತ್ತಿಗೆ” ನೀಡಿದ್ದಾನೆ ಎಂದು ಹೇಳಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆದಿಲ್ ತನ್ನನ್ನು ಕೊಲ್ಲಲು ಯೋಜಿಸುತ್ತಿದ್ದಾನೆ ಎಂದು ಆರೋಪ ಮಾಡಿರುವ ವಿಡಿಯೋ ಎಲ್ಲಡೆ ವೈರಲ್​​ ಆಗುತ್ತಿದೆ.

“ಆಗಾಗ್ಗೆ ಆದಿಲ್ ಕರೆ ಮಾಡುತ್ತಾನೆ. ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮತ್ತೆ ಜೊತೆಯಾಗಿ ಬದುಕೋಣ ಎಂದು ಹೇಳುತ್ತಾನೆ. ಆದರೆ, ಅವನನ್ನು ನಾನು ಕ್ಷಮಿಸಬಹುದು. ಮತ್ತೆ ಅವನೊಂದಿಗೆ ಬದುಕಲು ಸಾಧ್ಯವಿಲ್ಲ. ‘ಅವನು ನನ್ನನ್ನು ಕೊಲ್ಲಲು ಯಾಕೆ ಪ್ಲ್ಯಾನ್ ಮಾಡಿದ್ದಾನೋ ಗೊತ್ತಿಲ್ಲ. ಹಣಕ್ಕಾಗಿಯಾ ಅಥವಾ ದ್ವೇಷಕ್ಕಾಗಿಯಾ’ ಎಂದು ಗೊತ್ತಿಲ್ಲ. ಅವನು ಏನೇ ಪ್ಲ್ಯಾನ್ ಮಾಡಿದರೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ” ಎಂದಿದ್ದಾರೆ ರಾಖಿ ಸಾವಂತ್​​.

ಫೆಬ್ರವರಿ 7 ರಂದು ಪತಿ ಆದಿಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು ರಾಖಿ ಸಾವಂತ್. ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಮುಂಬೈನಲ್ಲಿ ಆದಿಲ್ ನನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಮೈಸೂರಿನಲ್ಲೂ ಆದಿಲ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದರಿಂದ ಆತನನ್ನು ಮೈಸೂರು ಜೈಲಿನಲ್ಲಿ ಇರಿಸಲಾಗಿದೆ.

ಮದುವೆ ನಿರಾಕರಿಸಿದ್ದಕ್ಕೆ ಮಹಿಳೆಯ ಕೂದಲು ಕತ್ತರಿಸಿ ಮೆರವಣಿಗೆ!

Latest Posts

ಲೈಫ್‌ಸ್ಟೈಲ್