ಬಳಕುವ ಬಳ್ಳಿಯಂತಿದ್ದ ನಿವೇತಾ ಈಗ ಹೇಗಾಗಿದ್ದಾರೆ ನೋಡಿ! ಗುರುತೇ ಸಿಗದಷ್ಟು ಬದಲಾದ ಸೌತ್​ ಬ್ಯೂಟಿ

nivetha thomas

ಹೈದರಾಬಾದ್​: ಟಾಲಿವುಡ್​ ಜನಪ್ರಿಯ ನಾಯಕಿಯರಲ್ಲಿ ನಿವೇತಾ ಥಾಮಸ್​ ಕೂಡ ಒಬ್ಬರು. ಗ್ಲಾಮರ್​ನಿಂದ ದೂರವಿರುವ ಮತ್ತು ನಟನೆಗೆ ಹೆಚ್ಚು ಸ್ಕೋಪ್ ಇರುವ ಪಾತ್ರಗಳಿಗೆ ಆದ್ಯತೆ ನೀಡುತ್ತಾರೆ. ನಿನ್ನು ಕೋರಿ, ಬ್ರೋಚೇವರೆವರೂರ, ಜೈ ಲವಕುಶ ಮತ್ತು ವಕೀಲ್​ ಸಾಬ್​ ಸಿನಿಮಾಗಳ ಮೂಲಕ ತೆಲುಗು ಜನರ ಹೃದಯದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿದ್ದಾರೆ. ತಮ್ಮ ನಟನೆಯಿಂದಲೇ ಚಿತ್ರಪ್ರೇಮಿಗಳ ನೆಚ್ಚಿನ ನಟಿ ಎನಿಸಿಕೊಂಡಿದ್ದಾರೆ.

ಅಂದಹಾಗೆ ನಿವೇತಾ ಥಾಮಸ್ ಅವರು ಚೆನ್ನೈ ಮೂಲದವರು. 2008ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಅಂಜನಾ ಸುಗುಣನ್ ಮೂಲಕ ಸಿನಿರಂಗಕ್ಕೆ ಪಾದರ್ಪಣೆ ಮಾಡಿದರು. ಇದಾದ ಬಳಿಕ ಅವರು ನಟ ಜೈ ನಟನೆಯ ನವೀನ ಸರಸ್ವತಿ ಸಬಥಮ್ ಚಿತ್ರದ ಮೂಲಕ ನಾಯಕಿಯಾಗಿ ತಮಿಳಿನಲ್ಲಿ ಪಾದರ್ಪಣೆ ಮಾಡಿದರು. ಈ ಚಿತ್ರದ “ವೈಟ್ ಅಂಡ್ ಲವ್” ಹಾಡು ಇನ್ನೂ ಅಭಿಮಾನಿಗಳ ಪ್ಲೇಲೀಸ್ಟ್​ನಲ್ಲಿದೆ.

ವಿಜಯ್​ ಅವರ ಕುರುವಿ ಚಿತ್ರದಲ್ಲಿ ವಿಜಯ್ ಅವರ ತಂಗಿಯಾಗಿ ನಟಿಸಿದ್ದಾರೆ. ಅಲ್ಲದೆ, ಜಿಲ್ಲಾ ಸಿನಿಮಾದಲ್ಲೂ ವಿಜಯ್​ಗೆ ತಂಗಿಯಾಗಿ ನಟಿಸಿ ಗಮನ ಸೆಳೆದರು. ಕಮಲ್ ಹಾಸನ್ ಅಭಿನಯದ ಪಾಪನಾಸಂ ಚಿತ್ರದಲ್ಲಿ ಕಮಲ್ ಮಗಳಾಗಿ ಮತ್ತು ರಜನಿಯ ಸೂಪರ್ ಹಿಟ್ ದರ್ಬಾರ್​ ಸಿನಿಮಾದಲ್ಲಿ ರಜನಿ ಮಗಳಾಗಿ ನಟಿಸಿದ ನಂತರ ನಿವೇತಾ ಥಾಮಸ್​ ತುಂಬಾ ಜನಪ್ರಿಯತೆ ಗಳಿಸಿದರು. ಇದಾದ ಬಳಿಕ ಬಳಿಕ ತೆಲುಗಿನಲ್ಲಿ ಬಿಜಿಯಾದ ನಿವೇತಾ, ಜೆಂಟಲ್​ಮ್ಯಾನ್​, ಜೈ ಲವಕುಶ ಹಾಗೂ ವಕೀಲ್​ ಸಾಬ್​ ಸಿನಿಮಾ ಮೂಲಕ ಒಳ್ಳೆಯ ಖ್ಯಾತಿ ಗಳಿಸಿದರು.

ಹೀಗಿರುವಾಗ ನಟಿ ನಿವೇತಾ ಥಾಮಸ್ ಅವರ ಲೇಟೆಸ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ತುಂಬಾ ತೆಳ್ಳಗೆ, ಬಳುಕುವ ಬಳ್ಳಿಯಂತಿದ್ದ ನಿವೇತಾ ಇದೀಗ ತೂಕ ಹೆಚ್ಚಿಸಿಕೊಂಡು ತುಂಬಾ ದಪ್ಪಗೆ ಕಾಣುತ್ತಿದ್ದಾರೆ. ತುಂಬಾ ತೂಕ ಹೆಚ್ಚಿಸಿಕೊಂಡಿದ್ದು, ಗುರುತೇ ಹಿಡಿಯದಷ್ಟು ಬದಲಾಗಿದ್ದಾರೆ. ಇವರೇನಾ ನಮ್ಮ ನಿವೇತಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿವೇತಾ ಥಾಮಸ್ ಅವರ ಮತ್ತೊಂದು ವಿಭಿನ್ನ ಸಿನಿಮಾ ಬರುತ್ತಿದೆ. ಆಕೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ’35 ಚಿನ್ನ ಕಥಾ ಕಾದು’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡಿದೆ. ತಿರುಪತಿಯ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾಯಿ ಪಾತ್ರದಲ್ಲಿ ನಿವೇತಾ ನಟಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂದು ತಂದೆ ಛೀಮಾರಿ ಹಾಕಿದ ನಂತರ ಮಗ ಮನೆ ಬಿಟ್ಟು ಹೋಗುತ್ತಾನೆ. ತಾಯಿ ಮಗುವಿಗಾಗಿ ಹಂಬಲಿಸುವ ದೃಶ್ಯಗಳು ಟೀಸರ್ ಅನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ. (ಏಜೆನ್ಸೀಸ್​)

ಮುಂಬೈ ಬಿಟ್ಟು ಈ ತಂಡ ಸೇರಲಿದ್ದಾರೆ ರೋಹಿತ್​ ಶರ್ಮ! ಸುಳಿವು ಬಿಟ್ಟುಕೊಟ್ಟ ಜಾಂಟಿ ರೋಡ್ಸ್​

ಎಂ.ಎಸ್​. ಧೋನಿ ಪ್ರಕಾರ ಈತನೇ ನೋಡಿ ವಿಶ್ವ ಕ್ರಿಕೆಟ್​ನ ಬೆಸ್ಟ್​ ಬ್ಯಾಟ್ಸ್​ಮನ್​!

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…