ಚೆನ್ನೈ: ಕಾಲಿವುಡ್ ತಲೈವಾ ರಜನಿಕಾಂತ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಗೊತ್ತೇ ಇದೆ. ಗುರುವಾರ ರಜನಿಕಾಂತ್ ಆವರನ್ನು ಆಸ್ಪತ್ರೆಯಿಂದ ಡಿಸ್ವಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ಬಂದ ಬಳಿಕ ಸೂಪರ್ಸ್ಟಾರ್ ಮೊದಲ ಬಾರಿಗೆ ತಮ್ಮ ರಿಯಾಕ್ಷನ್ ನೀಡಿದ್ದಾರೆ.
ಇದನ್ನು ಓದಿ: Rajinikanth | ರಜನಿಕಾಂತ್ ಹೆಲ್ತ್ ಅಪ್ಡೆಟ್; ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು
ರಜನಿಕಾಂತ್ ಅವರಿಗೆ ಶಸ್ತ್ರಚಿಕಿತ್ಸೆಯಿಲ್ಲದ ಟ್ರಾನ್ಸ್-ಕ್ಯಾತಿಟರ್ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ಈ ಹಿಂದೆ ಹೆಲ್ತ್ ರಿಪೋರ್ಟ್ ಬಿಡುಗಡೆ ವೇಳೆ ಹೇಳಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಷ್ಟೆ ಅಲ್ಲ ರಜನಿ ಅವರು ತಮ್ಮ ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ ನನ್ನ ಎಲ್ಲಾ ರಾಜಕೀಯ ಸ್ನೇಹಿತರಿಗೆ, ನನ್ನ ಎಲ್ಲಾ ಚಲನಚಿತ್ರ ಬಂಧು ಮಿತ್ರರಿಗೆ, ನನ್ನ ಎಲ್ಲಾ ಹಿತೈಷಿಗಳಿಗೆ, ಪತ್ರಿಕಾ ಮತ್ತು ಮಾಧ್ಯಮಗಳಿಗೆ, ನನ್ನ ಪ್ರಾಮಾಣಿಕ ಧನ್ಯವಾದಗಳು. ನನ್ನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ನನ್ನನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರಜನಿಕಾಂತ್ ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ರಾಜ್ಯಪಾಲ ಟಿಎನ್ ರವಿ ಅವರಿಗೆ ಧನ್ಯವಾದ ಸಲ್ಲಿಸಿ ಪ್ರತ್ಯೇಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ನವರಾತ್ರಿ ಸಮಯದಲ್ಲಿ ಚೆನ್ನೈನ ತಿರುವೊಟ್ಟಿಯೂರ್ ಶ್ರೀ ವಡಿವುಡೈ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜೈ ಭೀಮ್ ನಿರ್ದೇಶಕ ಜ್ಞಾನವೇಲ್ ನಿರ್ದೇಶನದ ರಜನಿಕಾಂತ್ ಅವರ ವೆಟ್ಟೈಯಾನ್ ಅಕ್ಟೋಬರ್ 10 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್; ವ್ಹೀಲ್ಚೇರ್ನಲ್ಲಿ ಕಾಣಿಸಿಕೊಂಡ ಸೂಪರ್ಸ್ಟಾರ್ ಫ್ಯಾನ್ಸ್ಗೆ ಹೇಳಿದಿಷ್ಟು | Bollywood