ರಜನಿಕಾಂತ್​ ನಟನೆಯ ಜೈಲರ್​ ಚಿತ್ರ ಬಿಡುಗಡೆಯಂದು ಉದ್ಯೋಗಿಗಳಿಗೆ ರಜೆ ಘೋಷಿಸಿದ ಕಂಪನಿ

Jailer
Published on

ಬೆಂಗಳೂರು/ಚೆನ್ನೈ: ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ ಬಹುನಿರೀಕ್ಷಿತ ಜೈಲರ್​ ಚಿತ್ರ ಇದೇ ಆಗಸ್ಟ್​ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ನೆಚ್ಚಿನ ನಟನನ್ನೂ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2021ರಲ್ಲಿ ಬಿಡುಗಡೆಯಾಗಿದ್ದ ಅಣ್ಣಾತ್ತೆ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ರಜನಿಕಾಂತ್​ ಈಗ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ರಾರಾಜಿಸಲು ಬರುತ್ತಿದ್ದಾರೆ.

ಜೈಲರ್​ ಚಿತ್ರ ಬಿಡುಗಡೆ ಹಿನ್ನಲೆ ತಮಿಳುನಾಡು ಮೂಲದ ಕಂಪನಿಯೊಂದು ಆಗಸ್ಟ್​ 10ರಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಉನೊ ಅಕ್ವಾ ಕೇರ್​ ಎಂಬ ಸಂಸ್ಥೆಯೂ ಚಿತ್ರ ಬಿಡುಗಡೆ ನಿಮಿತ್ತ ತನ್ನ ಕೆಲಸಗಾರರಿಗೆ ರಜೆಯನ್ನೂ ನೀಡಿದೆ.

ಸಾರ್ವತ್ರಿಕ ರಜೆ

ಈ ಕುರಿತು ಟ್ವೀಟ್​ ಮಾಡಿರುವ ಸಂಸ್ಥೆಯ ಮುಖ್ಯಸ್ಥರು ಜೈಲರ್​ ಚಿತ್ರ ಬಿಡುಗಡೆ ನಿಮಿತ್ತ ಆಗಸ್ಟ್​ 10ರಂದು ಕಂಪನಿಯ ಉದ್ಯೋಗಿಗಳಿಗೆ ಸಾರ್ವತ್ರಿಕ ರಜೆಯನ್ನೂ ಘೋಷಿಸಲಾಗಿದೆ. ಜೈಲರ್​ ಚಿತ್ರ ವೀಕ್ಷಿಸಲು ಇಷ್ಟಪಡುವ ನಮ್ಮ ಕಂಪನಿಯ ಉದ್ಯೋಗಿಗಳಿಗೆ ನಾವು ಅವತ್ತಿನ ದಿನದ ಟಿಕೆಟ್​ಅನ್ನು ಹಂಚುತ್ತೇವೆ ಎಂದು ತಿಳಿಸಲಾಗಿದೆ.

ನಮ್ಮ ತಾತ-ಮುತ್ತಾತನ ಕಾಲದಿಂದ ನಾವು ರಜನಿಕಾಂತ್​ ಅವರ ಚಿತ್ರಗಳನ್ನೂ ನೋಡುತ್ತಾ ಬೆಳೆದಿದ್ದೇವೆ. ಈ ರಜೆ ಅವರಿಗೆ ಸಮರ್ಪಣೆ. ಚೆನ್ನೈ, ಬೆಂಗಳೂರು ಸೇರಿದಂತೆ ಇದು ಶಾಖೆಗಳಿಗೂ ಅನ್ವಯವಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ಟ್ವೀಟ್​ ಮಾಡಿರುವ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಜೈಲರ್​ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದು, ಅನಿರುದ್ಧ ರವಿಂಚಂದರ್​ ಸಂಗೀತ ಸಂಯೋಜಿಸಿದ್ದಾರೆ. ವಿಜಯ್​ ಕಾರ್ತಿಕ್​ ಕಣ್ಣನ್​ ಛಾಯಾಗ್ರಾಕರಾಗಿ ಕೆಲಸ ಮಾಡಿದ್ದು, ಕಲಾನಿಧಿ ಮಾರನ್​ ಜೈಲರ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net