ಕೊಯ್ಲಿಗೆ ಬಂದಿದ್ದ ಬಾಳೆ ಗಿಡಗಳನ್ನು ಕಡಿದು ಹಾಕಿದ ವಿದ್ಯುತ್​ ಇಲಾಖೆಯ ಅಧಿಕಾರಿಗಳು

banana crop
ನಾಶಪಡಿಸಿದ ಬಾಳೆಗಿಡ
Published on

ತರುವನಂತಪುರಂ: ಕೊಯ್ಲಿಗೆ ಬಂದಿದ್ದ 400ಕ್ಕೂ ಹೆಚ್ಚು ಗಿಡಗಳನ್ನು ರಾಜ್ಯ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಕಡಿದು ಹಾಕುವ ಮೂಲಕ ರೈತನಿಗೆ ಶಾಕ್​ ನೀಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೋತಮಂಗಲ ಎಂಬಲ್ಲಿ ನಡೆದಿದೆ.

ಕೋತಮಂಗಲ ಪ್ರದೇಶದಲ್ಲಿ ಹಾದುಹೋಗುವ ಹೈಟೆನ್ಷನ್​ ವೈರ್​ಗೆ ಬಾಳೆ ಎಲೆಗಳು ತಾಗುತ್ತಿವೆ ಎಂದು ಕಾರಣ ನೀಡಿ ರಾಜ್ಯ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ಕತ್ತರಿಸಿ ರೈತನಿಗೆ ಆಘಾತವನ್ನುಂಟು ಮಾಡಿದ್ದಾರೆ.

ಥಾಮಸ್​ ಎಮಬುವವರ ತೋಟದಲ್ಲಿ ಘಟನೆ ನಡೆದಿದ್ದು, ಕೋತಮಂಗಲ ಪ್ರದೇಶದಲ್ಲಿ 220 ಕೆವಿ ವಿದ್ಯುತ್​ ಲೈನ್​ಗೆ ಗಿಡಗಳು​ ತಾಗುತ್ತಿದ್ದ ಕಾರಣ ವೈರ್​ಗೆ ಹಾನಿಯಾಗಲಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಇತ್ತೀಚಿಗೆ ವಿದ್ಯುತ್​ ಪ್ರವಹಿಸಿದ ಪ್ರಕರಣವನ್ನೂ ಮುಂದಿಟ್ಟುಕೊಂಡು ಅಧಿಕಾರಿಗಳು ಕೊಯ್ಲಿಗೆ ಬಂದಿದ್ದ ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.

Farmer Thomas
ರೈತ ಥಾಮಸ್​

ಈ ಕುರಿತು ಮಾತನಾಡಿರುವ ರೈತ ಥಾಮಸ್​ ವಿದ್ಯುತ್​ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ಸೂಚನೆಯನ್ನೂ ನೀಡದೆ ಏಕಾಏಕಿ ಬಾಳೆಗಿಡಗಳನ್ನೂ ಕಡಿದು ಹಾಕಿದ್ದಾರೆ. ಓಣಂ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನೂ ಆಧರಿಸಿ ಮುಂದಿನ ವಾರದಿಂದ ಕಟಾವು ಮಾಡಲು ನಿರ್ಧರಿಸಲಾಗಿತ್ತು.

ಅಧಿಕಾರಿಗಳು ಏಕಾಏಕಿ ಗಿಡವನ್ನೂ ಕಡಿದು ಹಾಕುವ ಬದಲು ಲೈನ್​ಗೆ ಅಡ್ಡ ಬಂದಿದ್ದ ಎಳೆಗಳನ್ನು ಕತ್ತರಿಸಿ ಬೆಳೆಯನ್ನೂ ಉಳಿಸಬಹುದಿತ್ತು. ಕೊಯ್ಲಿಗೆ ಬಂದಿದ್ದ ಫಸಲನ್ನು ಕಡಿದು ಹಾಕುವ ಮೂಲಕ ಅಧಿಕಾರಿಗಳು ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ರೈತ ಥಾಮಸ್​ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net