ಶೇಷ ಭಾರತಕ್ಕೆ ರಜತ್​ ಪಾಟೀದಾರ್​ ನಾಯಕ; ವರ್ಷದ 3ನೇ ಪ್ರಶಸ್ತಿ ಗೆಲುವಿನ ನಿರೀಕ್ಷೆ!

web patidar
Published on

ನವದೆಹಲಿ: ಆರ್​ಸಿಬಿಗೆ ಐಪಿಎಲ್​ ಕಪ್​ ಮತ್ತು ಕೇಂದ್ರ ವಲಯಕ್ಕೆ ದುಲೀಪ್​ ಟ್ರೋಫಿ ಗೆಲ್ಲಿಸಿಕೊಟ್ಟ ಬಳಿಕ ರಜತ್​ ಪಾಟೀದಾರ್​ ಹಾಲಿ ವರ್ಷ ತನ್ನ ನಾಯಕತ್ವದಲ್ಲಿ 3ನೇ ಪ್ರಶಸ್ತಿ ಜಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅಕ್ಟೋಬರ್​ 1ರಿಂದ ನಾಗ್ಪುರದಲ್ಲಿ ನಡೆಯಲಿರುವ ರಣಜಿ ಚಾಂಪಿಯನ್​ ವಿದರ್ಭ ವಿರುದ್ಧದ ಇರಾನಿ ಕಪ್​ ಪಂದ್ಯದಲ್ಲಿ ಅವರು ಶೇಷ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಋತುರಾಜ್​ ಗಾಯಕ್ವಾಡ್​ ತಂಡದ ಉಪನಾಯಕರಾಗಿದ್ದರೆ, ಭಾರತ ಟೆಸ್ಟ್​ ತಂಡದಿಂದ ಹೊರಬಿದ್ದ ಅಭಿಮನ್ಯು ಈಶ್ವರನ್​, ಆಕಾಶ್​ದೀಪ್​ ಕೂಡ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಯಾವ ಆಟಗಾರರೂ ಶೇಷ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ವಿದರ್ಭ ತಂಡವನ್ನು ವಿಕೆಟ್​ ಕೀಪರ್​&ಬ್ಯಾಟರ್​ ಅಕ್ಷಯ್​ ವಾಡ್ಕರ್​ ಮುನ್ನಡೆಸಲಿದ್ದಾರೆ.

ಶೇಷ ಭಾರತ: ರಜತ್​ ಪಾಟೀದಾರ್​ (ನಾಯಕ), ಅಭಿಮನ್ಯು ಈಶ್ವರನ್​, ಆರ್ಯನ್​ ಜುಯಲ್​ (ವಿ.ಕೀ), ಋತುರಾಜ್​ ಗಾಯಕ್ವಾಡ್​ (ಉಪನಾಯಕ), ಯಶ್​ ಧುಲ್​, ಶೇಕ್​ ರಶೀದ್​, ಇಶಾನ್​ ಕಿಶನ್​ (ವಿ.ಕೀ), ತನುಷ್​ ಕೋಟ್ಯಾನ್​, ಮಾನವ್​ ಸುಥರ್​, ಗುರ್​ನೂರ್​ ಬ್ರಾರ್​, ಖಲೀಲ್​ ಅಹ್ಮದ್​, ಆಕಾಶ್​ದೀಪ್​, ಅಂಶುಲ್​ ಕಾಂಬೋಜ್​, ಸಾರಾಂಶ್​ ಜೈನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net