

ನವದೆಹಲಿ: ಬೆನ್ನುನೋವಿನ ಸಮಸ್ಯೆಯಿಂದಾಗಿ ರೆಡ್ಬಾಲ್ ಕ್ರಿಕೆಟ್ನಿಂದ 6 ತಿಂಗಳ ವಿರಾಮ ಪಡೆದಿರುವ ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್, ಸೆಪ್ಟೆಂಬರ್ 30ರಿಂದ ಕಾನ್ಪುರದಲ್ಲಿ ಆಸ್ಟ್ರೆಲಿಯಾ ಎ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಇರಾನಿ ಕಪ್ ಪಂದ್ಯಕ್ಕೆ ತನ್ನನ್ನು ಪರಿಗಣಿಸದಂತೆ ಕೇಳಿಕೊಂಡಿದ್ದ ಕಾರಣ ಶ್ರೇಯಸ್ರನ್ನು ಶೇಷ ಭಾರತ ತಂಡಕ್ಕೆ ಸೇರಿಸಲಾಗಿಲ್ಲ. ಏಷ್ಯಾಕಪ್ನಲ್ಲಿ ಆಡುತ್ತಿರುವ ಅಭಿಷೇಕ್ ಶರ್ಮ, ತಿಲಕ್ ವರ್ಮ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಸರಣಿಯ 2-3ನೇ ಪಂದ್ಯಕ್ಕೆ ಭಾರತ ಎ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಮೊದಲ ಏಕದಿನಕ್ಕೆ ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್ಸಿಮ್ರನ್ ಸಿಂಗ್ (ವಿ.ಕೀ), ರಿಯಾನ್ ಪರಾಗ್, ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ನಿಶಾಂತ್ ಸಿಂಧು, ಗುರುಜಪ್ನೀತ್ ಸಿಂಗ್, ಯಧ್ವೀರ್ ಸಿಂಗ್, ರವಿ ಬಿಷ್ಣೋಯಿ, ಅಭಿಷೇಕ್ ಪೊರೆಲ್ (ವಿ.ಕೀ), ಪ್ರಿಯಾಂಶ್ ಆರ್ಯ, ಸಿಮ್ರನ್ಜೀತ್ ಸಿಂಗ್.
2-3ನೇ ಪಂದ್ಯಕ್ಕೆ ತಿಲಕ್ ವರ್ಮ (ಉಪನಾಯಕ), ಅಭಿಷೇಕ್ ಶರ್ಮ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಸೇರ್ಪಡೆ; ಪ್ರಿಯಾಂಶ್ ಆರ್ಯ, ಸಿಮ್ರನ್ಜೀತ್ ಸಿಂಗ್ ಔಟ್.