ಸಿದ್ಧವಾಗಿದೆ ರಾಜಸ್ಥಾನ್ ರಾಯಲ್ಸ್ ತಂಡದ 2019ರ ಐಪಿಎಲ್ ಸಾಕ್ಷ್ಯಚಿತ್ರ ...!

Rajasthan Royals for web
Published on

ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡ, 2019ರ ಐಪಿಎಲ್ ಕಾರ್ಯಚಟುವಟಿಕೆ ಕುರಿತು ಆಗಸ್ಟ್ 1 ರಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದೆ. ‘ಇನ್‌ಸೈಡ್ ಸ್ಟೋರಿ’ ಹೆಸರಿನಲ್ಲಿ ಮೂರು ಭಾಗಗಳಲ್ಲಿ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. ಇದರೊಂದಿಗೆ ಹಿಂದಿನ ಆವೃತ್ತಿಯನ್ನು ಘಟನೆಗಳನ್ನು ಮೆಲುಕು ಹಾಕುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್‌ನಲ್ಲಿ ವಿಶೇಷ ತಂಡವಾಗಿ ಕಾಣಿಸಿಕೊಂಡಿದೆ. ತಂಡದ ಸ್ಟಾರ್ ಆಟಗಾರರ ಸಂದರ್ಶನ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಚಿತ್ರಿಕರಿಸಲಾಗಿದೆ.

ತಂಡದ ಸ್ಟಾರ್ ಆಟಗಾರರಾದ ನಾಯಕ ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಅವರ ಸಂದರ್ಶವನ್ನು ಚಿತ್ರಿಕರಿಸಲಾಗಿದ್ದು, ಹಿಂದೆ ನೋಡಿರದ ಕೆಲವೊಂದು ವಿಡಿಯೋ ತುಣುಕುಗಳನ್ನು ಚಿತ್ರಕ್ಕೆ ಸೇರಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ರಾಯಲ್ಸ್ ತಂಡ 7ನೇ ಸ್ಥಾನ ಅಲಂಕರಿಸಿತ್ತು. ಕಳೆದ ಮಾರ್ಚ್ ತಿಂಗಳಿಂದಲೂ ಸಾಕ್ಷ್ಯಚಿತ್ರವನ್ನು ಚಿತ್ರಿಕರಿಸಲಾಗಿದೆ. ತಂಡದ ಸಾಕ್ಷ್ಯಚಿತ್ರದ ಬಿಡುಗಡೆಗೆ ತಂಡದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್ ಅಭಿಮಾನಿಗಳಿಗೆ ಇದೊಂದು ವಿಶೇಷ ಅನುಭವವಾಗಿರಲಿದೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಸಿಒಒ ಜೇಕ್ ಲುಶ್ ಮೆಕ್ರಮ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net