More

    ಐಪಿಎಲ್ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್​ಗೆ ಮತ್ತೊಂದು ಶಾಕ್; ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್​ ಆಟಗಾರ

    ಜೈಪುರ: ಮಾರ್ಚ್​ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್​ಗೆ ದಿನಗಣನೆ ಶುರುವಾಗಿದ್ದು, ಅಭಿಮಾನಿಗಳು ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಪ್ರಾರಂಭೋತ್ಸವಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಬಾರಿಯ ಟೂರ್ನಿ ಪ್ರಮುಖ ಆಟಗಾರರ ಗೈರಿನೊಂದಿಗೆ ಪ್ರಾರಂಭವಾಗುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಮತ್ತೋರ್ವ ಸ್ಟಾರ್​ ಆಟಗಾರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

    ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ವೈಯಕ್ತಿಕ ಕಾರಣಗಳಿಂದ 17ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಕಳೆದ ವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ, ಜಂಪಾ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ ₹1.5 ಕೋಟಿ ನೀಡಿ ಖರೀದಿಸಿತ್ತು.

    ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಬಳಿಕ ಜಂಪಾ ಭಾರತ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್​ ಹಾಗೂ ಬಿಬಿಎಲ್​ನಲ್ಲಿ ಭಾಗಿಯಾಗಿದ್ದರು. ಆಸ್ಟ್ರೇಲಿಯಾ ತಂಡದ ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆಯಲ್ಲಿ ಅವರ ಹೆಸರನ್ನು ಐಪಿಎಲ್‌ನಿಂದ ಹಿಂಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ವಿದೇಶಕ್ಕೆ ಹೋಗಲು ಅಪ್ಪನಿಗೆ 30 ಲಕ್ಷ ರೂ. ಪಂಗನಾಮ ಹಾಕಿದ ಪುತ್ರಿ; ಮುಂದೇನಾಯ್ತು?

    ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೇಗಿ ಪ್ರಸಿದ್ಧ ಕೃಷ್ಣ ಈಗಾಗಲೇ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ, ಜಂಪಾ ಅನುಪಸ್ಥಿಯು ರಾಜಸ್ಥಾನ ತಂಡಕ್ಕೆ ದುಬಾರಿಯಾಗುವ ಸಾಧ್ಯತೆ ಇದೆ. ಜಂಪಾ ಹೊರತುಪಡಿಸಿ ರಾಜಸ್ಥಾನ ರಾಯಲ್ಸ್​ನಲ್ಲಿ ಭಾರತದ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಇದ್ಧಾರೆ.

    ಕಳೆದ ವರ್ಷದ ಆವೃತ್ತಿಯಲ್ಲಿ ರಾಜಸ್ಥಾನ ಪರ 6 ಪಂದ್ಯಗಳನ್ನು ಆಡಿದ್ದ ಜಂಪಾ, 23.50ರ ಸರಾಸರಿಯಲ್ಲಿ 8 ವಿಕೆಟ್ ಉರುಳಿಸಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ 22 ರನ್‌ಗೆ 3 ವಿಕೆಟ್ ಉರುಳಿಸುವ ಮೂಲಕ ಅವರು ತಂಡದ ಗೆಲುವಿಗೆ ರೂವಾರಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts