More

    IPL 2024: ಸಂದೀಪ್​-ಯಶಸ್ವಿ ಸಾಹಸ; ಮುಂಬೈ ಎದುರು ರಾಜಸ್ಥಾನ ರಾಯಲ್ಸ್​​ಗೆ ಸುಲಭ ಜಯ, ಪ್ಲೇಆಫ್​ಗೆ ಸನಿಹ

    ಜೈಪುರ: ವೇಗಿ ಸಂದೀಪ್​ ಶರ್ಮ (18ಕ್ಕೆ 5) ಬಿಗಿ ಬೌಲಿಂಗ್​ ದಾಳಿ ಮತ್ತು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (104*ರನ್​, 60 ಎಸೆತ, 9 ಬೌಂಡರಿ, 7 ಸಿಕ್ಸರ್​) ಶತಕದಾಟದ ಬಲದಿಂದ ರಾಜಸ್ಥಾನ ರಾಯಲ್ಸ್​ ತಂಡ ಐಪಿಎಲ್-17ರಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ 9 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 7ನೇ ಗೆಲುವು ಸಂಪಾದಿಸಿದ ಸಂಜು ಸ್ಯಾಮ್ಸನ್​ ಬಳಗ ಪ್ಲೇಆಫ್​​ ಹಂತಕ್ಕೆ ಬಹುತೇಕ ಸನಿಹ ತಲುಪಿದರೆ, ಹಾರ್ದಿಕ್​ ಪಾಂಡ್ಯ 5ನೇ ಸೋಲಿನೊಂದಿಗೆ ಮತ್ತೆ ಲಯ ತಪ್ಪಿತು.

    ಸವಾಯಿ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಮುಂಬೈ 20 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಬಳಿಕ ತಿಲಕ್​ ವರ್ಮ (65 ರನ್​, 45 ಎಸೆತ, 5 ಬೌಂಡರಿ, 3 ಸಿಕ್ಸರ್​) ಅರ್ಧಶತಕದ ಹೋರಾಟದಿಂದ 9 ವಿಕೆಟ್​ಗೆ 179 ರನ್​ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ 18.4 ಓವರ್​ಗಳಲ್ಲಿ 1 ವಿಕೆಟ್​ಗೆ 183 ರನ್​ ಗಳಿಸಿ ನಿರಾಯಾಸವಾಗಿ ಗೆಲುವಿನ ದಡ ಸೇರಿತು.

    ಜೈಸ್ವಾಲ್​ ಯಶಸ್ವಿ ಚೇಸಿಂಗ್​
    ರಾಯಲ್ಸ್​ ಚೇಸಿಂಗ್​ ವೇಳೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಜೋಸ್​ ಬಟ್ಲರ್​ (35) ಮೊದಲ ವಿಕೆಟ್​ಗೆ ಜೈಸ್ವಾಲ್​ ಜತೆ 48 ಎಸೆತಗಳಲ್ಲಿ 74 ರನ್​ ಸೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಮಳೆ ವಿರಾಮದ ಬಳಿಕ ಪೀಯುಷ್​ ಚಾವ್ಲಾ ಮುಂಬೈಗೆ ಮೊದಲ ಯಶ ತಂದರು. ನಂತರ ನಾಯಕ ಸಂಜು ಸ್ಯಾಮ್ಸನ್​ (38*) ಜತೆಗೂಡಿ ಮುರಿಯದ 2ನೇ ವಿಕೆಟ್​ಗೆ 65 ಎಸೆತಗಳಲ್ಲಿ 109 ರನ್​ ಪೇರಿಸುವ ಮೂಲಕ ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು. ಇನಿಂಗ್ಸ್​ನ 19ನೇ ಓವರ್​ನ ಮೊದಲ ಎಸೆತದಲ್ಲಿ ಸಿಂಗಲ್ಸ್​ ಕಸಿಯುವ ಮೂಲಕ ಜೈಸ್ವಾಲ್​ 59 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ ಬೌಂಡರಿ ಬಾರಿಸಿ ಗೆಲುವು ಸಾರಿದರು.

    IPL 2024: ಆರ್​ಸಿಬಿ ಸೋಲಿನ ನಡುವೆ ವಿಶಿಷ್ಟ ದಾಖಲೆ ಬರೆದ ವಿರಾಟ್​ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts