More

    ಪ್ರಿಯತಮೆಯ ಗಂಡನ ಪ್ರಾಣ ತೆಗೆದು, ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿದ ಪ್ರಿಯಕರ

    ಪಾಲಿ: ಪತ್ನಿಯ ಪ್ರಿಯಕರನೊಬ್ಬ ಆಕೆಯ ಗಂಡನನ್ನು ಕೊಲೆ ಮಾಡಿ ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತಿಟ್ಟು ಅದರ ಮೇಲೆ ಗಿಡ ನೆಟ್ಟಿರುವ ರಾಜಸ್ಥಾನದ ಪಾಲಿಯಲ್ಲಿ ನಡೆದಿದೆ.

    ಇದನ್ನೂ ಓದಿ: ತನಿಖೆ ವೇಳೆ ರೋಚಕ ಸಂಗತಿಗಳ ಬಗ್ಗೆ ಬಾಯ್ಬಿಟ್ಟ ಶಂಕಿತ ಉಗ್ರರು..

    ಘಟನೆಗೆ ಸಂಬಂಧಿಸಿದಂತೆ ಮದನಲಾಲ್ ಎಂಬಾತನನ್ನು ಬಂಧಿಸಲಾಗಿದ್ದು, ಆತ 33 ವರ್ಷದ ಜೋಗೇಂದ್ರ ಎಂಬಾತನನ್ನು ಕೊಂದು ಮುಂಡವನ್ನು ಸಮೀಪದ ಕಾಡಿನಲ್ಲಿ ಹಾಗೂ ಮನೆಯಿಂದ 100 ಮೀಟರ್ ದೂರದಲ್ಲಿರುವ ತೋಟದಲ್ಲಿ ತಲೆ, ಕೈ ಮತ್ತು ಕಾಲುಗಳನ್ನು ಹೂತಿಟ್ಟಿದ್ದನು.

    ಘಟನೆ ಹಿನ್ನೆಲೆ:
    ಜೋಗೇಂದ್ರ ಎಂಬಾತ ಜುಲೈ 11ರಂದು ಮನೆಯಿಂದ ಹೋದವನು ವಾಪಾಸ್ಸು ಬಂದಿರಲಿಲ್ಲ. ಆತನ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಎರಡು ದಿನಗಳ ಕಾಲ ವಿಚಾರಿಸಿದ ಆತನ ತಂದೆ ಮಿಶ್ರಾಲಾಲ್ ಮೇಘವಾಲ್ ಕೊನೆಗೆ ಜುಲೈ 13 ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದನು.

    ಅಲ್ಲದೇ ತನ್ನ ಮಗನ ಸಾವಿನ ಬಗ್ಗೆ ಮದನ್‌ಲಾಲ್‌ ಕೈವಾಡ ಇರಬಹುದೆಂದು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದ. ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಅನುಮಾನದ ಮೇಲೆ ಮದನ್‌ಲಾಲ್‌ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಯು ಜೋಗೇಂದ್ರನ ಪತ್ನಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಹಾಗೂ ಆತನ ಕೊಲೆ ತಾನೇ ಮಾಡಿ ಸಮಾಧಿ ಸ್ಥಳದ ಮೇಲೆ ಮಾವಿನ ಸಸಿ ನೆಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts