More

    ತನಿಖೆ ವೇಳೆ ರೋಚಕ ಸಂಗತಿಗಳ ಬಗ್ಗೆ ಬಾಯ್ಬಿಟ್ಟ ಶಂಕಿತ ಉಗ್ರರು..

    ಬೆಂಗಳೂರು: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ಹಲವಾರು ರೋಚಕ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    ಒಂದೂವರೆ ತಿಂಗಳ ಹಿಂದೆ ಸುಲ್ತಾನ್ ಪಾಳ್ಯಕ್ಕೆ ಬಂದಿದ್ದ ಶಂಕಿತರು ಪೇಂಟಿಂಗ್​ ಕೆಲಸ ಮಾಡುತ್ತೇವೆ ಎಂದು ಹೇಳಿದ್ದ ಆರೋಪಿಗಳು ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದರು. ಹಿಂದುಗಳ ಮನೆಯಲ್ಲಿ ವಾಸವಾಗಿದ್ದ ಶಂಕಿತರು 6 ಸಾವಿರ ರೂ. ಮನೆ ಬಾಡಿಗೆ, 50 ಸಾವಿರ ರೂ. ಅಡ್ವಾನ್ಸ್​​​ ಆಗಿ ಕೇಳಿದ್ದ ಮನೆ ಮಾಲೀಕರಿಗೆ ಬಾಡಿಗೆಯನ್ನು ಮಾತ್ರ ಕೊಟ್ಟಿದ್ದರು. ಆದರೆ ಅಡ್ವಾನ್ಸ್​​​ನ್ನು ಕೊಟ್ಟಿರಲಿಲ್ಲ. ಅಲ್ಲದೇ ಆರೋಪಿಗಳು ಅನುಮಾನ ಬರುವ ರೀತಿಯಲ್ಲಿ ನಡೆದುಕೊಂಡಿದ್ದಿಲ್ಲ. 

    ಇದನ್ನೂ ಓದಿ: ವಿರೋಧ ಪಕ್ಷಗಳಿಂದ I.N.D.I.A. ಹೆಸರಿನ ಬಳಕೆ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ ನಾಯಕ

    ಐವರೂ ಕೂಡ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಸಂಚು ರೂಪಿಸಿದ್ದರು. ವಿಚಾರಣೆ ವೇಳೆಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. 2008ರ ಸರಣಿ ಬಾಂಬ್ ಸ್ಫೋಟದ ರೂವಾರಿ ನಾಸಿರ್ ಮತ್ತು 2017ರ ಕೇಸ್​ನ ಮುಖ್ಯ ಆರೋಪಿ ಈ ಐದು ಜನರಿಗೆ ತರಬೇತಿ ಕೊಟ್ಟಿದ್ದಾರೆ. ಮುಖ್ಯ ಆರೋಪಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಇವರು ಏನೆಲ್ಲಾ ಪ್ಲ್ಯಾನ್​ ಮಾಡಿಕೊಂಡಿದ್ದರು ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತದೆ. ಆರೋಪಿಗಳನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ.

    ಸಿಸಿಬಿಯಿಂದ ಸುಲ್ತಾನ್ ಪಾಳ್ಯದ ಮನೋರಮಾ ಪಾಳ್ಯದಲ್ಲಿ ಶಂಕಿತರ ಬಂಧನವಾಗಿದ್ದು, ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್​​ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts