ಬ್ಲಾಕ್​ ಫಂಗಸ್​​ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ

black
Published on

ಜೈಪುರ : ಕರೊನಾದಿಂದ ಚೇತರಿಸಿಕೊಂಡವರನ್ನೇ ಹೆಚ್ಚಾಗಿ ಆಕ್ರಮಿಸುತ್ತಿರುವ ಮ್ಯೂಕರ್​ಮೈಕೋಸಿಸ್​(ಬ್ಲಾಕ್ ಫಂಗಸ್​)ಅನ್ನು ರಾಜಸ್ಥಾನ ಸರ್ಕಾರವು ಸಾಂಕ್ರಾಮಿಕ ಖಾಯಿಲೆ ಎಂದು ಘೋಷಿಸಿದೆ. ಹಾಲಿ, ರಾಜ್ಯದಲ್ಲಿ ಸುಮಾರು 100 ಬ್ಲಾಕ್ ಫಂಗಸ್​ ರೋಗಿಗಳಿದ್ದು, ಜೈಪುರದ ಸವಾಯಿ ಮಾನ್​ ಸಿಂಗ್ ಆಸ್ಪತ್ರೆಯಲ್ಲಿ ಈ ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದವರ ಚಿಕಿತ್ಸೆಗೆಂದೇ ಪ್ರತ್ಯೇಕ ವಾರ್ಡ್​ಅನ್ನೂ ಸಜ್ಜುಗೊಳಿಸಲಾಗಿದೆ.

ರಾಜಸ್ಥಾನ ಎಪಿಡೆಮಿಕ್​ ಆ್ಯಕ್ಟ್​ 2020 ರಡಿಯಲ್ಲಿ ಮ್ಯೂಕರ್​ಮೈಕೋಸಿಸ್​ ಅನ್ನು ಸಾಂಕ್ರಾಮಿಕ ರೋಗವೆಂದು ನೋಟಿಫೈ ಮಾಡಲಾಗಿದ್ದು, ಯಾರಿಗಾದರೂ ಈ ಖಾಯಿಲೆ ಬಂದ ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿ ಆದೇಶ ಜಾರಿಗೊಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಕಾರ್ಯದರ್ಶಿ ಅಖಿಲ್ ಅರೋರ ಹೇಳಿದ್ದಾರೆ. ಕರೊನಾ ವೈರಸ್​ ಮತ್ತು ಬ್ಲಾಕ್​ ಫಂಗಸ್​​ಗೆ ಸಮಗ್ರ ಮತ್ತು ಸಂಘಟಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net