ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ ಕರೊನಾ ಪಾಸಿಟಿವ್!

lal cm rajastan
Published on

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ 56 ವರ್ಷ ವಯಸ್ಸಿನ ಭಜನ್ ಲಾಲ್ ಶರ್ಮಾ ಅವರಿಗೆ ಕರೊನಾ ಪಾಸಿಟಿವ್‌ ಆಗಿದೆ. ಮುಖ್ಯಮಂತ್ರಿಗಳೇ ತಮ್ಮ ಟ್ಟೀಟರ್​ ಖಾತೆಯಲ್ಲಿ ತನಗೆ ಸೋಂಕು ದೃಢಪಟ್ಟ ಕುರಿತು ಹೇಳಿಕೊಂಡಿದ್ದಾರೆ.

ಬುಧವಾರ (ಮಾರ್ಚ್​ 06) ವೈದ್ಯರು ಕೋವಿಡ್ ಪಾಸಿಟಿವ್ ಎಂದು ದೃಢಪಡಿಸಿದ್ದಾರೆ. ಪ್ರತಿಯೊಂದು ವಿಚಾರವನ್ನೂ ಭಜನ್​ ಲಾಲ್ ಶರ್ಮಾ ಅವರು ಶೇರ್‌ ಮಾಡಿಕೊಳ್ಳುತ್ತಾರೆ. ಅದೇ ರೀತಿ, ತಮಗೆ ಕರೊನಾ ಸೋಂಕು ತಗುಲಿರುವ ವಿಷಯವನ್ನೂ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.

'ಕರೊನಾ ಪರೀಕ್ಷೆಗೆ ಒಳಗಾಗಿದ್ದು ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ನನಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ವೈದ್ಯರ ಸಲಹೆಯಂತೆ ಸದ್ಯ ಐಸೋಲೇಶನ್‌ನಲ್ಲಿದ್ದೇನೆ.

ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ, ವರ್ಚುವಲ್ ಮಾಧ್ಯಮದ ಮೂಲಕ ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಸಿಎಂ ಶರ್ಮಾ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net