More

    ಸಂದೇಶಖಾಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

    ಪಶ್ಚಿಮ ಬಂಗಾಳ: ದೇಶದಲ್ಲಿ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿರುವ ಸಂದೇಶಖಾಲಿ ಗ್ರಾಮದಲ್ಲಿ ಟಿಎಂಸಿ ನಾಯಕ ಶಹಜಹಾನ್​ ಶೇಖ್​ರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮಾ.6) ಭೇಟಿ ಮಾಡಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬರಸಾತ್​​ನಲ್ಲಿ ರ್‍ಯಾಲಿ ಸಂದರ್ಭ ಪ್ರಧಾನಿ ಮೋದಿ ಮಹಿಳೆಯರನ್ನು ಭೇಟಿ ಮಾಡಿದ್ದಾರೆ.

    ಇದನ್ನೂ ಓದಿ:ರಾಕ್ಷಸಿ ತಾಯಿಯಿಂದಲೇ ಚಿತ್ರಹಿಂಸೆಗೊಳಗಾದ ಮಗುವನ್ನು ನೋಡಬೇಕು ಎಂದಿದ್ದೇಕೆ ಧ್ರುವ ಸರ್ಜಾ! ಹೀಗ್ಯಾಕೆ ಹೇಳಿದ್ರು?

    ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಮೋದಿ, ಅಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಜತೆಗೆ ಮಾತಕತೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮೋದಿ ಮುಂದೆ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯ ಬಗ್ಗೆ ಹೇಳಿಕೊಂಡಿದ್ದಾರೆ.

    ತಮ್ಮ ಮೇಲಿನ ದೌರ್ಜನ್ಯದ ಕುರಿತಂತೆ ಪ್ರಧಾನಿಗೆ ವಿವರಿಸುವ ವೇಳೆ ಮಹಿಳೆಯರು ಭಾವುಕರಾಗಿದ್ದಾರೆ. ಒಬ್ಬ ತಂದೆ ರೀತಿ ಮೋದಿ ತಾಳ್ಮೆಯಿಂದ ಅವರ ನೋವನ್ನು ಆಲಿಸಿದ್ದಾರೆ. ನಂತರ ಅವರ ಜೊತೆ ಮಾತನಾಡಿದ ಮೋದಿ ನಿಮ್ಮ ನೋವುವನ್ನು ನಾನು ಅರ್ಥಮಾಡಿಕೊಳ್ಳುವೇ ಎಂದು ಹೇಳಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿದೆ.

    ಉತ್ತರ 24 ಪರಗಣದ ಸಂದೇಶ್‌ಖಾಲಿ ಎಂಬ ಹಳ್ಳಿಯು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಹಜಹಾನ್​ ಮತ್ತು ಅವರ ಸಹಾಯಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

    ಫೆಬ್ರವರಿ 29ರಂದು ಟಿಎಂಸಿ ನಾಯಕ ಶಹಜಹಾನ್​ ಅವರನ್ನು ಬಂಧಿಸಿರುವ ಪೊಲೀಸರು ಕೋಲ್ಕತ್ತಾ ಹೈಕೋರ್ಟ್​ ಆದೇಶದ ಬಳಿಕ ಮಂಗಳವಾರ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದಾರೆ. ಟಿಎಂಸಿ ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಿದೆ. ಹಲವಾರು ಗ್ರಾಮಸ್ಥರು ಶಹಜಹಾನ್​ ಮತ್ತು ಅವನ ಸಹಚರರಿಂದ ಭೂಕಬಳಿಕೆ ಮಾಡಿದ್ದಾರೆ.

    ಬರಾಸತ್‌ನಲ್ಲಿ ತಮ್ಮ ರ್ಯಾಲಿಗೂ ಮುನ್ನ ಪ್ರಧಾನಿ ಮೋದಿ ಅವರು ಸಂದೇಶಖಾಲಿ ಪ್ರಕರಣ ಕುರಿತು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶಖಾಲಿಯಲ್ಲಿ ನಡೆದಿರುವ ಘಟನೆ ನಾಚಿಕೆಗೇಡಿನ ಸಂಗತಿ. ಇದಕ್ಕೆ ಕಾರಣರಾದ ವ್ಯಕ್ತಿಯನ್ನು ರಕ್ಷಿಸಲು ಟಿಎಂಸಿ ಸರ್ಕಾರ ಪ್ರಯತ್ನಿಸುತ್ತಿದೆ. ಆದಾಗ್ಯೂ, ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆಯನ್ನು ಅನುಭವಿಸಿದ್ದಾರೆ ಎಂದು ದೂರಿದರು. ಸಂದೇಶಖಾಲಿ ಚಂಡಮಾರುತ ಪಶ್ಚಿಮ ಬಂಗಾಳದ ಪ್ರತಿಯೊಂದು ಭಾಗಕ್ಕೂ ತಲುಪುತ್ತದೆ ಎಂದು ಪ್ರಧಾನಿ ಹೇಳಿದರು.

    ರಾಕ್ಷಸಿ ತಾಯಿಯಿಂದಲೇ ಚಿತ್ರಹಿಂಸೆಗೊಳಗಾದ ಮಗುವನ್ನು ನೋಡಬೇಕು ಎಂದಿದ್ದೇಕೆ ಧ್ರುವ ಸರ್ಜಾ! ಹೀಗ್ಯಾಕೆ ಹೇಳಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts