More

    ರಜನಿಕಾಂತ್, ಮೋಹನ್ ಬಾಬು ಒರಿಜಿನಲ್ ಗ್ಯಾಂಗ್​ಸ್ಟರ್​ಗಳಂತೆ …

    ಹೈದರಾಬಾದ್​: ತಮಿಳು ನಟ ರಜನಿಕಾಂತ್​ ಮತ್ತು ತೆಲುಗು ನಟ ಮೋಹನ್​ ಬಾಬು ಆತ್ಮೀಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆಗಾಗ ಅವರಿಬ್ಬರೂ ಭೇಟಿಯಾಗುವುದು, ಜತೆಗೆ ಕಾಲ ಕಳೆಯುವುದು ಇವೆಲ್ಲವೂ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಇತ್ತೀಚೆಗೆ, ಈ ಆಪ್ತಮಿತ್ರರು ಮತ್ತೊಮ್ಮೆ ಭೇಟಿ ಮಾಡಿ, ಜತೆಯಾಗಿ ಒಂದಿಷ್ಟು ಸಮಯ ಕಳೆದಿದ್ದಾರೆ.

    ಇದನ್ನೂ ಓದಿ: VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ !

    ಏಪ್ರಿಲ್​ ತಿಂಗಳ ಪೂರಾ ರಜನಿಕಾಂತ್​ ತಮ್ಮ ಅಣ್ಣಾತ್ತೆ ಚಿತ್ರದ ಚಿತ್ರೀಕರಣಕ್ಕೆ ಹೈದರಾಬಾದ್​ನಲ್ಲಿ ಬೀಡುಬಿಟ್ಟಿದ್ದರು. ಮೇ 13ರವರೆಗೂ ಅವರು ಹೈದರಾಬಾದ್​ನಲ್ಲೇ ಇದ್ದು, ತಮ್ಮ ಕೆಲಸವನ್ನು ಮುಗಿಸಿಕೊಟ್ಟು ಬಂದಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಆತ್ಮೀಯ ಗೆಳೆಯ ಮೋಹನ್​ ಬಾಬು ಅವರ ಮನೆಗೂ ಹೋಗಿ, ಅಲ್ಲಿ ಎರಡು ದಿನಗಳ ಕಾಲ ತಂಗಿದ್ದರಂತೆ.

    ಈಗ ಮೋಹನ್​ ಬಾಬು ಅವರ ಮಗ ವಿಷ್ಣು ಮಂಚು, ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರಜನಿಕಾಂತ್​ ಅವರು ತಮ್ಮ ಮನೆಗೆ ಬಂದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳು ಅವು. ಅದರಲ್ಲಿ ರಜನಿಕಾಂತ್​ ಮತ್ತು ಮೋಹನ್​​ ಬಾಬು ಜತೆಗಿದ್ದು, ಅವರನ್ನು ಒರಿಜಿನಲ್​ ಗ್ಯಾಂಗ್​ಸ್ಟರ್​ಗಳು ಎಂದು ಪ್ರೀತಿಯಿಂದ ಸಂಬೋಧಿಸಿದ್ದಾರೆ.

    ಇದನ್ನೂ ಓದಿ: ಗೋಲ್ಡನ್ ಟೆಂಪಲ್​ನಲ್ಲಿ ರಣದೀಪ್ ಹೂಡಾ ಕ್ಷಮೆ ಕೇಳಿದ್ದು ಏಕೆ?

    ಹೀಗೆ ಮೋಹನ್​ ಬಾಬು ಅವರ ಹೈದರಾಬಾದ್​ ಮನೆಯಲ್ಲಿ ಒಂದಿಷ್ಟು ಒಳ್ಳೆಯ ಸಮಯವನ್ನು ಕಳೆದ ರಜನಿಕಾಂತ್​, ಅದಾದ ಮರುದಿನವೇ ಚೆನ್ನೈಗೆ ವಾಪಸ್ಸಾಗಿದ್ದಾರೆ. ಸದ್ಯ ಚೆನ್ನೈನಲ್ಲೇ ಇರುವ ರಜನಿಕಾಂತ್​, ಕರೊನಾ ಎರಡನೇ ಅಲೆ  ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಅಣ್ಣಾತ್ತೆ ಚಿತ್ರದ ಡಬ್ಬಿಂಗ್​ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts