More

    ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

    ಬೆಂಗಳೂರು: ಚಿತ್ರೋದ್ಯಮದ ಹಲವು ಉತ್ಸಾಹಿ ಯುವ ತಂಡ ಹೆಸರಿಗೆ ತಕ್ಕಂತೆ ‘ಉಸಿರು’ ಉಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ತತಕ್ಷಣ ಪೂರೈಕೆ ಮಾಡಲಾಗುತ್ತಿದೆ. ಇದೀಗ ಆ ಕಾರ್ಯಕ್ಕೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಕೈ ಜೋಡಿಸಲಿದ್ದಾರೆ! ಹೌದು, ಸದ್ಯ ಮೈಸೂರಿನಲ್ಲಿರುವ ದರ್ಶನ್, ಸಿನಿಮಾ ಮಂದಿಯೇ ಸೇರಿ ಮಾಡುತ್ತಿರುವ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ‘ಉಸಿರು’ ಮಾಡುವ ಕೆಲಸವನ್ನು ತಂಡದವರು ದರ್ಶನ್ ಅವರಿಗೂ ವಿವರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಬೆಂಗಳೂರಿಗೆ ಆಗಮಿಸಿ ತಂಡಕ್ಕೆ ಸಾಥ್ ನೀಡಲಿದ್ದಾರೆ. ಅಂದಹಾಗೆ, ಹತ್ತು ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಿ ಆಕ್ಸಿಜನ್ ಕಾನ್ಸನ್​ಟ್ರೆಟರ್​ಗಳನ್ನು ಖರೀದಿಸಿ, ಗಂಭೀರ ಸಮಸ್ಯೆಯಲ್ಲಿರುವ ರೋಗಿಗಳ ಮನೆಗೇ ಅದನ್ನು ತಲುಪಿಸಿ ತುರ್ತು ಆರೈಕೆ ನೀಡುವ ಕೆಲಸವನ್ನು ಈ ತಂಡ ಮಾಡುತ್ತಿದೆ.

    ಈ ತಂಡದಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಚಿತ್ರಸಾಹಿತಿ ಕವಿರಾಜ್, ನಟಿಯರಾದ ನೀತು ಶೆಟ್ಟಿ, ಅಕ್ಷತಾ ಎಂ, ನಟ ಸಂಚಾರಿ ವಿಜಯ್, ಸಂಗೀತ ನಿರ್ದೇಶಕ ಡಾ. ಕಿರಣ್ ತೊಟಂಬೈಲ್, ನಿರ್ದೇಶಕರಾದ ಕವಿತಾ ಲಂಕೇಶ್, ಕೆ.ಎಂ. ಚೈತನ್ಯ, ಸಾಧುಕೊಕಿಲ, ವಿನಯ್ ಪಾಂಡವಪುರ, ಶಕ್ತಿ ಎಂ, ಪವನ್ ಮುಂತಾದವರಿದ್ದಾರೆ. ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ ‘ಉಸಿರು’ ಕೆಲಸ ಮಾಡುತ್ತಿದೆ. 50ಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿರುವ ಈ ತಂಡ, ಸ್ಯಾಚುರೇಷನ್ ಪ್ರಮಾಣ ಕಡಿಮೆ ಇರುವವರಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಈ ಕೆಲಸಕ್ಕೆ ದರ್ಶನ್ ಕೈ ಜೋಡಿಸುತ್ತಿದ್ದಂತೆ ಜಿಲ್ಲಾಮಟ್ಟದಲ್ಲಿನ ಅವರ ಅಭಿಮಾನಿ ಸಂಘಟನೆಗಳಿಂದ ಈ ಕಾರ್ಯ ಚುರುಕು ಪಡೆದುಕೊಳ್ಳಲಿದೆ ಎಂಬುದು ಉಸಿರು ತಂಡದ ಸದಸ್ಯರ ಮಾತು.

    ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

    ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts