ಸ್ಟಾರ್​ ಡೈರೆಕ್ಟರ್​ ರಾಜಮೌಳಿ ಪ್ರೀತಿಯ ಬಲೆಯಲ್ಲಿ ಬಿದ್ದ ರಶ್ಮಿ! ಜಾಲತಾಣದಲ್ಲಿ ಸದ್ದು ಮಾಡ್ತಿದೆ ವಿಡಿಯೋ | Rajamouli – Rashmi Gautam

Rajamouli – Rashmi Gautam
Published on

Rajamouli – Rashmi Gautam : ಟಾಲಿವುಡ್​ ಖ್ಯಾತ ನಿರ್ದೇಶಕ ರಾಜಮೌಳಿ ಅವರು ತಮ್ಮ ವೃತ್ತಿಜೀವನದ ಆರಂಭದಿಂದಲೂ ನಿರ್ದೇಶಿಸಿದ ಸಿನಿಮಾಗಳು ಸೂಪರ್ ಡೂಪರ್​ ಹಿಟ್ ಆಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬಾಹುಬಲಿ ಮತ್ತು ಆರ್‌ಆರ್‌ಆರ್ ಸಿನಿಮಾಗಳು ವಿಶ್ವಾದ್ಯಂತ ಕ್ರೇಜ್ ಗಳಿಸಿವೆ.

ಅಂದಹಾಗೆ ರಾಜಮೌಳಿ ಅವರು ತಮ್ಮ ನಿರ್ದೇಶನದ ಚಿತ್ರಗಳಲ್ಲಿ, ಸಾಂದರ್ಭಿಕವಾಗಿ ಪರದೆಯ ಮೇಲೆ ಮಿಂಚುತ್ತಾರೆ. ಅಗತ್ಯವಿದ್ದಾಗ ಇತರರ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ತೋರಿಸುತ್ತಾರೆ. ಇದೀಗ ರಾಜಮೌಳಿ ಅವರ ಹಳೆಯ ವಿಡಿಯೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ರಾಜಮೌಳಿ ಅವರು ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿ ರಶ್ಮಿ ಗೌತಮ್ ಅವರೊಂದಿಗೆ ನಟಿಸಿದ್ದಾರೆ. ಇದು ಹೊಸ ಸಂಗತಿಯೇನಲ್ಲ ಆದರೆ, ವಿಡಿಯೋದಲ್ಲಿ ಇಬ್ಬರ ನಡುವಿನ ಲವ್ ಟ್ರ್ಯಾಕ್ ದೃಶ್ಯಗಳು ಬಿಸಿ ವಿಷಯವಾಗುತ್ತಿವೆ. ಈ ವಿಡಿಯೋವನ್ನು ನೋಡಿದ ನಂತರ, ನೆಟ್ಟಿಗರು ಇಬ್ಬರೂ ಒಟ್ಟಿಗೆ ಯಾವಾಗ ನಟಿಸಿದರು ಎಂದು ಆಶ್ಚರ್ಯ ಪಡುತ್ತಿದ್ದಾರೆ.

ವಿಡಿಯೋ ಹಿನ್ನೆಲೆ ಏನು?

ವಿಕ್ರಮಾರ್ಕುಡು ಸಿನಿಮಾ ಬಿಡುಗಡೆಯ ಸಮಯದಲ್ಲಿ, ಸ್ಟಾರ್ ಮಾ (ಆಗ ಮಾ ಟಿವಿ) 'ಯುವ' ಎಂಬ ತೆಲುಗು ಧಾರಾವಾಹಿಯನ್ನು ಪ್ರಸಾರ ಮಾಡುತ್ತಿತ್ತು. ಆ ಧಾರಾವಾಹಿಯಲ್ಲಿ ರಶ್ಮಿ ರೇಡಿಯೋ ಜಾಕಿ ಪಾತ್ರವನ್ನು ನಿರ್ವಹಿಸಿದ್ದರು ಮತ್ತು ರಾಜಮೌಳಿ ಅವರು ವಿಕ್ರಮಾರ್ಕುಡು ಪ್ರಚಾರದ ಭಾಗವಾಗಿ ಆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ರಶ್ಮಿಯೊಂದಿಗೆ ಲವ್​ಸ್ಟೋರಿಯಲ್ಲಿ ನಟಿಸಿದರು. ಈ ವಿಡಿಯೋದಲ್ಲಿ ರಶ್ಮಿ ಅವರು ರಾಜಮೌಳಿ ಪ್ರೀತಿಯ ಬಲೆಯಲ್ಲಿ ಬಿದ್ದಿರುವಂತೆ ತೋರಿಸಲಾಗಿದೆ. ಈ ವಿಡಿಯೋ ಈಗ ಏಕೆ ವೈರಲ್ ಆಗುತ್ತಿದೆ ಎಂಬುದು ತಿಳಿದಿಲ್ಲ. ಆದರೆ, ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net