More

    ಕೊನೆಗೂ ಒಂದಾಯ್ತು ಈ ಜೋಡಿ; ‘ಆರ್​ಆರ್​ಆರ್​’ ಬಳಿಕ ಈ ನಟನಿಗೆ ಆ್ಯಕ್ಷನ್ ಕಟ್​ ಹೇಳ್ತಾರೆ ಎಸ್​.ಎಸ್​. ರಾಜಮೌಳಿ

    ಆರ್​ಆರ್​ಆರ್​ ಸಿನಿಮಾದಲ್ಲಿ ನಿರ್ದೇಶಕ ಎಸ್​ಎಸ್​ ರಾಜಮೌಳಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಸಹ ಮುಗಿದಿದೆ. ಹೀಗಿರುವಾಗಲೇ ರಾಜಮೌಳಿಯ ಮುಂದಿನ ಸಿನಿಮಾ ಯಾವುದೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಸುದ್ದಿಹರದಾಡಿದ್ದಂತೆ ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಜತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆ ಹರಿದಾಡಿದ್ದ ಸುದ್ದಿ ಇದೀಗ ನಿಜವಾಗಿದ್ದು, ಆರ್​ಆರ್​ಆರ್ ಮುಗಿಯುತ್ತಿದ್ದಂತೆ ಮಹೇಶ್​ ಬಾಬು ಜತೆ ಕೈ ಜೋಡಿಸಲಿದ್ದಾರೆ ರಾಜಮೌಳಿ. ಈ ಮೊದಲು ರಾಜಮೌಳಿ ಬಾಹುಬಲಿ ಪ್ರಭಾಸ್​ ಜತೆಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತಾದರೂ ಅದು ಸುಳ್ಳು ಎಂದಿದ್ದಾರೆ ರಾಜಮೌಳಿ.
    ಈವರೆಗೂ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡು, ಫ್ಯಾಮಿಲಿ ಪ್ರೇಕ್ಷಕರಿಗೂ ಮಹೇಶ್​ ಇಷ್ಟವಾಗಿದ್ದರು. ಇದೀಗ ಅವರನ್ನು ಹಿಂದೆಂದೂ ಕಾಣಿಸದ ಅವತಾರದಲ್ಲಿ ತೋರಿಸಲು ರಾಜಮೌಳಿ ಪ್ಲ್ಯಾನ್​ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ಮಹೇಶ್​ಗಾಗಿ ರಾಜಮೌಳಿ ಕಥೆ ಸಿದ್ಧಪಡಿಸಿದ್ದು, ಇಬ್ಬರೂ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಒಟ್ಟಿಗೆ ಕೈ ಜೋಡಿಸಲು ಸಮಯ ಕೂಡಿಬಂದಿರಲಿಲ್ಲ. ಈಗ 2021ಕ್ಕೆ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆಯಂತೆ. ಅಂದಹಾಗೆ ದುರ್ಗಾ ಆರ್ಟ್ಸ್​ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts