

ಆಂಧ್ರಪ್ರದೇಶ: ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ವಿವಾದವೇ ಸ್ಫೋಟಗೊಂಡಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಲಾವಣ್ಯ ಎಂಬ ಮಹಿಳೆ ತನಗೆ ನಟ ರಾಜ್ ತರುಣ್ ಮೋಸ ಮಾಡಿದ್ದಾನೆ. ಬೇರೆಯೊಬ್ಬಳೊಂದಿಗೆ ಸಂಬಂಧ ಹೊಂದುವ ಮೂಲಕ ನನಗೆ ದ್ರೋಹ ಬಗೆದಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಇದೀಗ ಪೊಲೀಸರು ನಟ ರಾಜ್ ತರುಣ್ರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಡಪದ ಅಪ್ಪಣ್ಣ ಜಯಂತಿ 21ರಂದು
ರಾಜ್ ತರುಣ್ ಮಾಜಿ ಪ್ರಿಯತಮೆ ಲಾವಣ್ಯ, ಆತ ಚಿತ್ರನಟಿ ಮಾಳವಿ ಮಲ್ಹೋತ್ರಾ ಜತೆಗೆ ಸಂಬಂಧ ಹೊಂದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ನನ್ನಿಂದ ದೂರವಾಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರಿಗೆ ದೂರಿದ್ದರು. ಸದ್ಯ ಪೊಲೀಸರು ನಟನನ್ನು ಬಂಧಿಸಿ, ಕಸ್ಟಡಿಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ಇಲ್ಲಿಗೆ ಇದು ಮುಗಿತು ಎನ್ನುವಷ್ಟರಲ್ಲಿ ನಿನ್ನೆ (ಜು.12) ತಡರಾತ್ರಿ ತನ್ನ ವಕೀಲರಿಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂಬ ಸಂದೇಶ ಕಳಿಸಿದ್ದಾರೆ.
ಆಕೆಯ ಸಂದೇಶ ನೋಡುತ್ತಿದ್ದಂತೆ ಗಾಬರಿಗೊಂಡ ವಕೀಲ, ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ, ನಂತರ ಹೈದರಾಬಾದ್‌ನ ನರಿಸಿಂಗಿ ಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಆಕೆಯ ಮನೆಗೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಲಾವಣ್ಯಳನ್ನು ಆತ್ಮಹತ್ಯೆ ಪ್ರಯತ್ನದಿಂದ ತಡೆದಿದ್ದಾರೆ. ಇಂತಹ ಕೆಟ್ಟ ನಿರ್ಧಾರ ಕೈಗೊಳ್ಳಬೇಡಿ. ಯಾರಿಂದಲೂ ಬೆದರಿಕೆ ಬರದಂತೆ ನಿಮ್ಮನ್ನು ನಾವು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದಕ್ಕೆ ಒಪ್ಪದ ಆಕೆ ಕಣ್ಣೀರಿಡುತ್ತ ರಾಜ್ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆ. ನನ್ನ ರಹಸ್ಯವಾಗಿ ಮದುವೆಯಾಗಿ, ಹೊಟ್ಟೆಯಲ್ಲಿದ್ದ ಮಗುವನ್ನು ಬಲವಂತವಾಗಿ ತೆಗೆಸಿದ್ದ ಎಂದು ಆರೋಪಿಸಿದರು. ತನಗೆ ಬೆದರಿಕೆಯೊಡ್ಡಿದ್ದ ನಟಿ ಮಾಳವಿ ಮಲ್ಹೋತ್ರಾ ವಿರುದ್ಧವು ಲಾವಣ್ಯ ದೂರು ದಾಖಲಿಸಿದ್ದಾರೆ. ರಾಜ್ ತರುಣ್ ತನ್ನ ಸಹ ನಟಿ ಮಾಲ್ವಿ ಜತೆ ಸಂಬಂಧ ಹೊಂದಿದ್ದಾನೆ. ನನ್ನಿಂದ ಅವರಿಬ್ಬರು ಸೇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ನನ್ನನ್ನು ಈ ರೀತಿ ದೂರ ಮಾಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಲಾವಣ್ಯ ಸರಣಿ ಆರೋಪಗಳನ್ನು ಎಸಗಿದ್ದಾರೆ.
ಮಾಳವಿ ಮತ್ತು ರಾಜ್ ತರುಣ್ ಇಬ್ಬರೂ ನನ್ನ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಆತ್ಮಹತ್ಯೆಗೆ ಮುಂದಾಗಿದ್ದ ಲಾವಣ್ಯ ಹೇಳಿಕೊಂಡಿದ್ದಾರೆ. ಎಫ್ಐಆರ್ನಲ್ಲಿ ಪೊಲೀಸರು ರಾಜ್ ತರುಣ್ರನ್ನು ಎ1 ಆರೋಪಿ ಮತ್ತು ನಟಿ ಮಾಳವಿ ಮಲ್ಹೋತ್ರಾರನ್ನು ಎ2 ಆರೋಪಿ ಎಂದು ಗುರುತಿಸಿದ್ದಾರೆ.