

ಮುಂಬೈ: ಅಶ್ಲೀಲತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿದ್ದರೂ ಮಾಧ್ಯಮಗಳ ಕಣ್ಣಲ್ಲಿ ಬೆತ್ತಲಾಗಿದ್ದೆ ಎಂದು ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅಭಿಪ್ರಾಯಪಟ್ಟಿದ್ದಾರೆ.
ಅಶ್ಲೀಲತೆ ಪ್ರಕರಣದಲ್ಲಿ 2021ರಲ್ಲಿ ಅವರನ್ನು ಬಂಧಿಸಿ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ ಅವರು ಜಾಮೀನು ಪಡೆದು ಹೊರಬಂದಿದ್ದರೂ, ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಜೈಲಿನಲ್ಲಿನ ತನ್ನ ಅನುಭವವನ್ನು ವಿವರಿಸಿದ ರಾಜ್ಕುಂದ್ರಾ, ಈ ಘಟನೆಯಿಂದ ತನಗೆ ನೋವಾಗಿದೆ ಮತ್ತು ಅವಮಾನವಾಗಿದೆ ಎಂದು ತಿಳಿಸಿದರು. ನನ್ನ ಘನತೆಯನ್ನು ಮಾಧ್ಯಮಗಳು ತೊಳೆದು ಹಾಕಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಜೈಲಿನಲ್ಲಿದ್ದರೂ ವಿವಸ್ತ್ರಗೊಂಡಿದ್ದೇನೆ, ಹೀಗಾಗಿಯೇ ಮುಂಬರುವ ನನ್ನ ನಟನೆಯ ಚೊಚ್ಚಲ ಚಿತ್ರದಲ್ಲಿ ಜೈಲು ಸಮಯವನ್ನು ಆಧರಿಸಿದೆ ಎಂದರು.
"ವೋ ನಂಗಾ ಹೈ ಕರ್ ದೇತೆ ಹೈ ಆಪ್ಕೋ (ಅವರು ನನ್ನನ್ನು ಬೆತ್ತಲೆಯಾಗಿ ಮಾಡಿದರು.) ಮೀಡಿಯಾ ಟು ನಂಗಾ ಕರ್ ಹಿ ರಹೀ ಥಿ ಮುಝೆ, ಉಪರ್ ಸೆ ಯೇ ಭಿ ಹೋ ಗಯಾ (ಮಾಧ್ಯಮಗಳು ಈಗಲೂ ನನ್ನನ್ನು ವಿವಸ್ತ್ರಗೊಳಿಸುತ್ತಿವೆ ಆದ್ದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ ಮತ್ತು ನೋಯಿಸಿದ್ದೇನೆ) ಎಂದು ನೋವು ತೋಡಿಕೊಳ್ಳುತ್ತಾರೆ.