ನಿಯಮಿತವಾಗಿ ಒಣದ್ರಾಕ್ಷಿ-ಬೆಲ್ಲ ಸೇವಿಸಿ ದೇಹದ ತೂಕ ಇಳಿಸಿ! ಸೇವಿಸುವ ವಿಧಾನ ಇಲ್ಲಿದೆ ನೋಡಿ….

raisins and jaggery
Published on

ನವದೆಹಲಿ: ಸಾಕಷ್ಟು ಮಂದಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಕೆಲವು ಗಂಟೆಗಳವರೆಗೆ ಯೋಗ, ವ್ಯಾಯಾಮ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಮಾಡುತ್ತಾರೆ. ವಾಸ್ತವವಾಗಿ ತೂಕವನ್ನು ಕಳೆದುಕೊಳ್ಳಲು ಕಷ್ಟಕರವಾದ ವ್ಯಾಯಾಮಗಳು ಬೇಕಿಲ್ಲ. ಈ ಎರಡು ಪದಾರ್ಥಗಳನ್ನು ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಸಾಕು, ಕೆಲವೇ ದಿನಗಳಲ್ಲಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಆ ಎರಡು ಪದಾರ್ಥಗಳು ಯಾವುವೆಂದರೆ ಒಣದ್ರಾಕ್ಷಿ ಮತ್ತು ಬೆಲ್ಲ. ಇವೆರಡನ್ನು ನಿಯಮಿತವಾಗಿ ಒಟ್ಟಿಗೆ ತೆಗೆದುಕೊಂಡರೆ, ನಿಮ್ಮ ದೇಹದಲ್ಲಿರುವ ಕೊಬ್ಬು ಕ್ರಮೇಣವಾಗಿ ಕರಗುತ್ತದೆ. ಇದರಿಂದ ಕೆಲವೇ ದಿನಗಳಲ್ಲಿ ನೀವು ತೂಕ ಕಳೆದುಕೊಳ್ಳುತ್ತೀರಿ. ಹಾಗಾದರೆ ಈ ಎರಡನ್ನು ಒಟ್ಟಿಗೆ ಹೇಗೆ ತೆಗೆದುಕೊಳ್ಳಬೇಕು? ಯಾವ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಈಗ ತಿಳಿಯೋಣ.

ಸೇವಿಸುವ ವಿಧಾನ

ಬಿಸಿನೀರು ತೆಗೆದುಕೊಳ್ಳಿ. 4 ರಿಂದ 5 ಒಣದ್ರಾಕ್ಷಿಗಳನ್ನು ರಾತ್ರಿಯಿಡಿ ನೆನೆಸಿಡಿ. ಬೆಳಗ್ಗೆ ಎದ್ದ ಕೂಡಲೇ ಏನನ್ನೂ ತಿನ್ನದೆ, ಒಣದ್ರಾಕ್ಷಿ ನೆನೆಸಿದ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿಕೊಂಡು ಸೇವಿಸಿ. ಇದನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಿಂದ ನಿಮ್ಮ ಕ್ಯಾಲರಿ ಕಡಿಮೆ ಆಗುತ್ತದೆ. ಅಲ್ಲದೆ, ನಿಮ್ಮ ದೇಹದ ತೂಕ ಸಹ ಕಡಿಮೆ ಆಗುತ್ತದೆ.

ಮೊಸರಿನೊಂದಿಗೆ ಸೇವಿಸಿ

ಮತ್ತೊಂದು ವಿಧಾನದಂತೆ ಬೆಳಿಗ್ಗೆ ಎದ್ದಾಗ 4 ರಿಂದ 5 ಒಣದ್ರಾಕ್ಷಿಗಳನ್ನು ಮೊಸರಿನಲ್ಲಿ ಬೆರೆಸಿ ಸೇವಿಸಿ. ಆ ಮೊಸರನ್ನು ಊಟದ ನಂತರವೇ ತೆಗೆದುಕೊಳ್ಳಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇವೆರೆಡರಲ್ಲಿದೆ ಪೌಷ್ಟಿಕಾಂಶಗಳು

ಒಣದ್ರಾಕ್ಷಿ ಮತ್ತು ಬೆಲ್ಲದ ಪೌಷ್ಟಿಕಾಂಶದ ಮೌಲ್ಯ ನಿಮಗೆ ತಿಳಿದಿದೆಯೇ? ಇವು ಸೂಪರ್ ಆಹಾರಗಳಾಗಿವೆ. ಇವು ರಕ್ತದೊತ್ತಡದ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಮೆಗ್ನಿಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲೆನಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಸತುವುಗಳಂತಹ ಅನೇಕ ಪೌಷ್ಟಿಕಾಂಶಗಳನ್ನು ಇವೆರೆಡು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net