Meteorological : ಮಾ.29ರಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು ಸೇರಿದಂತೆ ಮೈಸೂರು ಜಿಲ್ಲೆಗಳಲ್ಲಿ (ಮಾ.28) ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಶನಿವಾರದಿಂದ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ಮಳೆಯಾಗಲಿದೆ.
ಇದನ್ನೂ ಓದಿ:ಮಹಿಳೆಯರೆದುರು ವಿಮಾನದಲ್ಲಿ ಯುವಕನ ಹಸ್ತ ಮೈಥುನ; ಮುಂದೇನಾಯ್ತು? |Plane
ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಒಣ ಹವಾಮಾನ ರಾಜ್ಯದ ಉಳಿದ ಭಾಗಗಳಿಗಿಂತ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಹಾವೇರಿ ಬೆಂಕಿ ತಗುಲಿದ ಸ್ಥಳಕ್ಕೆಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ ಭೇಟಿ
ಬೆಂಗಳೂರು ಸೇರಿದಂತೆ ಧಾರವಾಡ, ಗದಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲ ಕಡೆ ಮಳೆ ಸುರಿಯವ ಸಂಭವ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇನ್ನು ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ 2 ರಿಂದ 4 ಹಾಗೂ ದಕ್ಷಿಣ ಒಳನಾಡಿನಲ್ಲಿ 2 ರಿಂದ 3ರಷ್ಟು ಉಷ್ಣಾಂಶ ದಾಖಲಾಗಲಿದೆ.
ಮಹಿಳೆಯರೆದುರು ವಿಮಾನದಲ್ಲಿ ಯುವಕನ ಹಸ್ತ ಮೈಥುನ; ಮುಂದೇನಾಯ್ತು? |Plane