ಮಳೆ ಅವಾಂತರ; ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆಂದು ಬೀಚ್ ಬೆಂಗಳೂರು ಮಾಡಿದ್ದಾರೆ; ಡಿ.ಕೆ.ಶಿ ವಿರುದ್ಧ ಕಿಡಿ ಕಾರಿದ ಆರ್​.ಅಶೋಕ್​ |Bangalore Rains

blank

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇನ್ನೂ ತಡರಾತ್ರಿ ಸುರಿದ ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ಬೆಳ್ಳಂ ಬೆಳಗ್ಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಶನಿವಾರದ ಮಳೆಗೆ ಕಾವೇರಿ ನಗರದ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು. ಸಾಯಿ ಲೇಔಟ್​​ಗೆ ಜಲ ಕಂಟಕ ಎದುರಾಗಿತ್ತು. ಇನ್ನೂ ಭಾನುವಾರ ರಾತ್ರಿ ಕೂಡ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ವಿಜಯನಗರ, ಚಾಮರಾಜಪೇಟೆ ಸೇರಿದಂತೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ವರ್ಷಧಾರೆ ಸುರಿದಿದೆ.

ಆರ್​.ಅಶೋಕ್​ ಆಕ್ರೋಶ

ಇನ್ನೂ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಆಗಿರುವ ಅವಾಂತರದ ಬಗ್ಗೆ ಟ್ವೀಟ್​ ಮಾಡಿ ವಿಪಕ್ಷ ನಾಯಕ ಆರ್​.ಅಶೋಕ್​ ಆಕ್ರೋಶ ಅಸಮಾಧಾನ ಹೊರಹಾಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿರುವ ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹಾಲು ಒಕ್ಕೂಟ ಚುನಾವಣೆ ಉಸಾಬರಿ ಮುಗಿದಿದ್ದರೆ ದಯವಿಟ್ಟು ಸ್ವಲ್ಪ ಬೆಂಗಳೂರಿನ ಅವಸ್ಥೆ ಕಡೆ ಗಮನ ಹರಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಾಕ್​ ಪರ ಬೇಹುಗಾರಿಕೆ; ಪಹಲ್ಗಾಮ್‌ಗೂ ಭೇಟಿ ನೀಡಿದ್ದ ​​’ಜ್ಯೋತಿ ಮಲ್ಹೋತ್ರಾ’ ; ತನಿಖೆಯಿಂದ ಬಹಿರಂಗ | Jyothi malhotra

ಮಳೆಗೆ ಸುಬ್ಬಯ್ಯ ಸರ್ಕಲ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಮತ್ತೊಂದೆಡೆ ಭಾರಿ ಮಳೆಗೆ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿ ಒಳಗೆ ನೀರು ನುಗ್ಗಿತ್ತು. ಕಚೇರಿ ಆವರಣದಲ್ಲಿ ಕೆರೆಯಂತಾಗಿ, ಸಿಸಿಬಿ ಕಚೇರಿ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ನಿರಂತರ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ರಸ್ತೆ ಮೇಲೆ ಚಲಿಸಲು ಪರದಾಟ ನಡೆಸಿದರು.

ನಗರದ ಮಾನ್ಯಥಾ ಟೆಕ್ ಪಾರ್ಕ್​ನಲ್ಲಿ ಮಳೆ ನೀರು ನಿಂತಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ. ಮತ್ತೊಂದೆಡೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ನೀರು ನಿಂತಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೊರ ವರ್ತಲ ರಸ್ತೆಯಲ್ಲಿ ಹೆಚ್ ಎಸ್ ಆರ್ ಕಡೆಗೆ ಹೋಗುವ ಮತ್ತು ಜಯದೇವ ಕಡೆಗೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸುವುದು ಮತ್ತು ಸಹಕರಿಸುವುದು ಉತ್ತಮ.
(ಏಜೆನ್ಸೀಸ್)

ಪಾಕ್​ ಪರ ಬೇಹುಗಾರಿಕೆ; ಪಹಲ್ಗಾಮ್‌ಗೂ ಭೇಟಿ ನೀಡಿದ್ದ ​​ಜ್ಯೋತಿ ಮಲ್ಹೋತ್ರಾ; ತನಿಖೆಯಿಂದ ಬಹಿರಂಗ | Jyothi malhotra

Share This Article

ಹೊಸ ಚಿಕನ್​ ರೆಸಿಪಿ ಟ್ರೈ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ರುಚಿಕರ ನೇಪಾಳಿ ಸ್ಟೈಲ್​ ಚಿಕನ್​ ಕರಿ! Sunday Special

Sunday Special : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ…

ಬೆಣ್ಣೆಯಂತೆ ಕೊಬ್ಬನ್ನು ಕರಗಿಸುವ ಬಟರ್‌ಫ್ರೂಟ್..! avocado ಆರೋಗ್ಯ ಪ್ರಯೋಜನಗಳು..

avocado: ಆವಕಾಡೊ ಆರೋಗ್ಯಕರ ಮತ್ತು ಪೌಷ್ಟಿಕ ಹಣ್ಣು. ಮಾರುಕಟ್ಟೆಯಲ್ಲಿ ಇದರ ಬೆಲೆ ತುಂಬಾ ಹೆಚ್ಚಾಗಿದೆ. ಅದಕ್ಕಾಗಿಯೇ…