ಕೆಯ್ಯೂರಿನಲ್ಲಿ ಮರಬಿದ್ದು ಮನೆಗೆ ಹಾನಿ

New Project (44)
Published on

ಪುತ್ತೂರು ಗ್ರಾಮಾಂತರ: ಮಳೆಯೊಂದಿಗೆ ಬೀಸಿದ ಭಾರಿ ಗಾಳಿಯಿಂದಾಗಿ ಕೆಯ್ಯೂರು ಗ್ರಾಮದ ಬೈರೆತ್ತಿಕೆರೆ ಎಂಬಲ್ಲಿ ಸೋಮವಾರ ರಾತ್ರಿ ವಾಸ್ತವ್ಯದ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರ ಉರುಳಿಬಿದ್ದು ಮನೆಗೆ ಹಾನಿಯಾಗಿದೆ.

ಬೈರೆತ್ತಿಕೆರೆ ನಿವಾಸಿ ರತ್ನಾವತಿ ನಾಯ್ಕ ಅವರ ಹೆಂಚಿನ ಮನೆಗೆ ಸಾಗುವಾನಿ ಮರವೊಂದು ಮುರಿದು ಬಿದ್ದಿದೆ. ಮನೆಯ ಮೇಲ್ಛಾವಣಿಯ ಪಕ್ಕಾಸು, ರೀಪು, ಹೆಂಚುಗಳು ಮುರಿದಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿದೆ. ಮರ ಉರುಳಿಬಿದ್ದ ವೇಳೆ ಮನೆಯಲ್ಲಿ ರತ್ನಾವತಿ ಮತ್ತು ಅವರ ಇಬ್ಬರು ಮಕ್ಕಳು ಮನೆಯೊಳಗೆ ಮಲಗಿದ್ದರು. ಅದೃಷ್ಟವಶಾತ್ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ ಪಾರ್ಥಿವ ಗೌಡ ಎಂಬುವರ ಕೊಟ್ಟಿಗೆ ಹಾನಿಗೊಂಡಿದೆ.

ಘಟನಾ ಸ್ಥಳಕ್ಕೆ ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯರಾದ ವಿಜಯ ಕುಮಾರ್, ತಾರಾನಾಥ ಕಂಪ, ಸುಭಾಷಿಣಿ, ಪಿಡಿಒ ನಮಿತಾ ಎ.ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಸಹಾಯಕ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net