ಒಳಮೊಗ್ರು ಗ್ರಾಮದ ವಿವಿಧೆಡೆ ಹಾನಿ

New Project (34)
Published on

ಪುತ್ತೂರು ಗ್ರಾಮಾಂತರ: ಭಾರಿ ಮಳೆಯಿಂದಾಗಿ ಪುತ್ತೂರು ಗ್ರಾಮಾಂತರ ಪ್ರದೇಶದ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿವೆ.

ಒಳಮೊಗ್ರು ಗ್ರಾಮದ ಉಜಿರೋಡಿ ನಿವಾಸಿ ಗೀತಾ ಆಚಾರ್ಯ ಅವರ ಮನೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರ್ಪುಂಜ ಕಾಲನಿಯ ನಿವಾಸಿ ಚಿತ್ರಾ ಎಂಬುವರ ವಾಸದ ಮನೆಯ ಗೋಡೆ ಕುಸಿದಿದೆ. ಮುಡಾಲಮೂಲೆ ನಿವಾಸಿ ಶೇಷಪ್ಪ ನಾಯ್ಕ ಅವರ ಮನೆ ಹಿಂಬದಿಯ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಸಮೀಪದ ಶಾಂತಿಗೋಡು ಎಂಬಲ್ಲಿ ಅವ್ವಮ್ಮ ಎಂಬುವರ ಹೆಂಚಿನ ಮನೆಯ ಹಿಂಬದಿಯ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಮನೆಯ ಹಿಂಬದಿಯ ಗೋಡೆ ಬಿರುಕುಬಿಟ್ಟಿದ್ದು, ಹಿಂಬದಿಯ ಮನೆಯ ಮೇಲ್ಛಾವಣಿಯ ಹೆಂಚುಗಳು ನಾಶವಾಗಿವೆ. ಒಳಮೊಗ್ರು ಗ್ರಾಮದ ಕಡ್ತಿಮಾರ್ ಎಂಬಲ್ಲಿ ಹಮೀದ್ ಅವರ ಮನೆಯ ಪಕ್ಕದಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ವಿದ್ಯುತ್ ಕಂಬ ಉರುಳಿ ಹಮೀದ್ ಅವರ ನೀರಿನ ಟ್ಯಾಂಕ್ ಮೇಲೆ ಬಿದ್ದು, ಟ್ಯಾಂಕ್ ಒಡೆದು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net