ಮರ ಬಿದ್ದು ಮನೆಗೆ ಹಾನಿ

rain
Published on

ಕಾಸರಗೋಡು: ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಮರ ಬುಡಸಹಿತ ಕಳಚಿ ಬಿದ್ದ ಪರಿಣಾಮ ಮನೆಗೆ ಹಾನಿ ಸಂಭವಿಸಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬು ಎಂಬುವರ ಮನೆ ಹಾನಿಗೀಡಾಗಿದೆ. ವಿದ್ಯುತ್ ಕಂಬ ವಾಲಿ ನಿಂತಿದ್ದು, ವಿದ್ಯುತ್ ತಂತಿ ರಸ್ತೆಗೆ ಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿಯನ್ವಯ ಇಲಾಖೆ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net