ಪ್ರಯಾಣಿಕರಿಗೆ ಸಿಹಿಸುದ್ದಿ; ತಕ್ಷಣವೇ ಜಾರಿಗೆ ಬರುವಂತೆ ರೈಲ್ವೆ ಇಲಾಖೆ ಆದೇಶ

south western railway
Published on

ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಕೋವಿಡ್ ಕಾರಣದಿಂದ ರೈಲಿನಲ್ಲಿ ಕಂಬಳಿ, ಹೊದಿಕೆ ನೀಡುವುದಕ್ಕೆ ವಿಧಿಸಿದ್ದ ನಿರ್ಬಂಧನವನ್ನು ರೈಲ್ವೆ ಇಲಾಖೆ ವಾಪಾಸ್ ತೆಗೆದುಕೊಂಡಿದೆ.

ರೈಲ್ವೆ ಇಲಾಖೆ ಒದಗಿಸುತ್ತಿದ್ದ ಈ ಸೌಲಭ್ಯವನ್ನು ಕೋವಿಡ್‌ನಿಂದಾಗಿ 2020 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ತಕ್ಷಣವೇ ಜಾರಿಗೆ ಬರುವಂತೆ ಎಸಿ ಕೋಚ್‌ನೊಳಗೆ ಲೆನಿನ್, ಬ್ಲಾಂಕೆಟ್‌ಗಳು ಮತ್ತು ಕರ್ಟನ್‌ಗಳ ಪೂರೈಕೆಯನ್ನು ಪ್ರಾರಂಭಿಸಬೇಕು ಎಂದು ರೈಲ್ವೆ ಮಂಡಳಿಯು ಎಲ್ಲಾ ರೈಲ್ವೆ ವಲಯಗಳಿಗೆ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಕೋವಿಡ್-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆ 2020 ರಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಸಿ ಕೋಚ್‌ಗಳಲ್ಲಿ ನೀಡಲಾದ ಈ ಸೌಲಭ್ಯವನ್ನು ಸ್ಥಗಿತಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net