More

  ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯಿಂದ ಸಂಸದರಿಗೆ ಮನವಿ

  ಕಾರವಾರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಶೇ.100 ರಷ್ಟು ಜಾರಿ ಮಾಡಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.
  ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಸದಸ್ಯರ ಜತೆ ಜಿಲ್ಲೆಯ ರೈಲ್ವೆ ಸೇವೆಗಳ ವಿಚಾರ ಚರ್ಚಿಸಿ ಅವರು ಮಾತನಾಡಿದರು. ಅಲಟ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅಡಿಗಲ್ಲು ಹಾಕಿದ್ದರು. ಬಿಜೆಪಿಗೆ ಈ ಯೋಜನೆಯ ಜತೆ ಭಾವನಾತ್ಮಕ ಸಂಬಂಧವಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಅವರೂ ಈ ಯೋಜನೆ ಜಾರಿ ಬಗ್ಗೆ ಕಾಳಜಿ ಹೊಂದಿದ್ದಾರೆ. ವಿ.ಸೋಮಣ್ಣ ಅವರು ರೈಲ್ವೆ ರಾಜ್ಯ ಖಾತೆ ಸಚಿವರಾಗಿರುವುದು ಇನ್ನಷ್ಟು ಅನುಕೂಲವಾಗಲಿದೆ. ಎಲ್ಲರೂ ಸೇರಿ ಖಂಡಿತ ಯೋಜನೆ ಜಾರಿಗೆ ತರಲಿದ್ದೇವೆ. ಸಮಿತಿಯಿಂದ ಅಗತ್ಯ ಸಹಕಾರ ಬೇಕಾಗಿದೆ ಎಂದರು.
  ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜಾರಿಯಿಂದ ಉತ್ತರ ಕನ್ನಡ ಸಾಕಷ್ಟು ಅಭಿವೃದ್ಧಿಯಾಗಲಿದೆ ಎಂದರು. ತಾಳಗುಪ್ಪಾ-ಹುಬ್ಬಳ್ಳಿ-ಶಿರಸಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಫೈನಲ್ ಅಲೈನ್‌ಮೆಂಟ್ ಸರ್ವೇಗೆ ಆದೇಶವಾಗಿದೆ. ಮುಂದಿನ ಕಾರ್ಯಗಳು ಆಗಬೇಕಿವೆ.
  ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವಕರ್ ಮಾತನಾಡಿ, ಮಾದನಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಂಡರ್ ಪಾಸ್ ಆಗಬೇಕಿದೆ. ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆ ಸರ್ವೇಗೆ ಪ್ರಯತ್ನ ಮಾಡಬೇಕಿದೆ ಎಂದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಸರ್ಕಾರ ಯೋಜನೆ ಜಾರಿಗೆ ಚುರುಕಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಮನವಿ ಮಾಡಿದರು. ಯೋಜನೆ ಜಾರಿಯಾದರೆ ಕರಾವಳಿ ಉತ್ತರ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಲಿದೆ ಎಂದು ವಿವರಿಸಿದರು.
  ಸೇವಾ ಸಮಿತಿಯ ಗೌರವ ಅಧ್ಯಕ್ಷ ಮಂಗಲದಾಸ ಕಾಮತ್, ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ಉಪಾಧ್ಯಕ್ಷ ವೆಂಟು ಮಾಸ್ತರ ಶೀಳ್ಯ, ಕಾರ್ಯಾಧ್ಯಕ್ಷ ರಾಜೀವ ಗಾಂವಕರ್, ಸದಸ್ಯ ವಸಂತ ನಾಯ್ಕ ಬಾವಿಕೇರಿ, ಚಂದ್ರಹಾಸ ನಾಯಕ ಗೋಕರ್ಣ ಇದ್ದರು.

  See also  31ಕ್ಕೆ ಸಂಸತ್​ ಸಮಿತಿ ಎದುರು ಹಾಜರಾಗಲ್ಲ: ಮಹುವಾ ಮೊಯಿತ್ರಾ
  https://www.vijayavani.net/port-minister-visited-to-karwar-port

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts