ಜಿಲ್ಲೆಯ ವಾಣಿಜ್ಯ ಬಂದರುಗಳು ಖಾಸಗಿಗೆ

Minister-Manakla-Vaidya-visit
Published on

ಕಾರವಾರ: ವಾಣಿಜ್ಯ ಬಂದರುಗಳನ್ನು ಖಾಸಗಿಗೆ ವಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಕಾರವಾರ ವಾಣಿಜ್ಯ ಬಂದರಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ ಅವರು, ಬಂದರುಗಳಲ್ಲಿ ಆದಾಯ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಅವುಗಳಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ.

ಕಾರವಾರ ಬಂದರಿನಲ್ಲಿ ಹಲವು ವರ್ಷಗಳಿಂದ ಬಿದ್ದಿದ್ದ ಗ್ರಾನೈಟ್‌ನ್ನು ಖಾಲಿ ಮಾಡಲು ಸೂಚಿಸಲಾಗಿದೆ. ಅಕ್ರಮ ಅದಿರು ಪ್ರಕರಣದ ಪರಿಣಾಮ ಕಾರವಾರ ಬಂದರಿನಲ್ಲಿ ಬಿದ್ದಿರುವ ಅದಿರನ್ನು ವಿಲೇವಾರಿ ಮಾಡಲು ನ್ಯಾಯಾಲಯಕ್ಕೆ ಅನುಮತಿ ಕೋರುವಂತೆ ಆದೇಶಿಸಿದ್ದೇನೆ.

ಕಾರವಾರದಲ್ಲಿ ಕೋಸ್ಟ್‌ಗಾರ್ಡ್‌ ಜಟ್ಟಿಯನ್ನು ಬೇರೆಡೆ ನಿರ್ಮಿಸಲು ಯೋಜನೆ ಸಿದ್ಧವಾಗಿದ್ದು, ಹಾಲಿ ಇರುವ 570 ಮೀಟರ್‌ ಜಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಕ್ರಮ ವಹಿಸಲಾಗುವುದು ಎಂದರು.

ಮೆರಿಟೈಮ್‌ ಬೋರ್ಡ್‌ ಸಿಇಒ ಜಯರಾಮ ರಾಯಪುರೆ, ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್‌ ಸಿ.ಸ್ವಾಮಿ, ಬಂದರು ಅಧಿಕಾರಿ ರಾಜಕುಮಾರ ಹೆಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net