ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ, ಬಂಧನ ವದಂತಿ; ಇಡಿ ಕೊಟ್ಟ ಸ್ಪಷ್ಟನೆ ಹೀಗಿದೆ!

ವಿಜಯವಾಣಿ - 2024-01-04T094605.386
Published on

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ನಮಗೆ ಲಭಿಸಿದೆ ಎಂದು ಎಎಪಿ ಟ್ವೀಟ್ ಮೂಲಕ ತಿಳಿಸಿತ್ತು. ಇದೀಗ ಈ ಕುರಿತಂತೆ ಜಾರಿ ನಿರ್ದೇಶನಾಲಯದ ಮೂಲಗಳು ಸ್ಪಷ್ಟನೆ ನೀಡಿವೆ.

ಆಪಾದಿತ ದೆಹಲಿ ಮದ್ಯ ನೀತಿ ಹಗರಣದಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಇಡಿ ನೀಡಿದ್ದ ಮೂರನೇ ಸಮನ್ಸ್‌ಗೂ ಕೇಜ್ರಿವಾಲ್ ಪ್ರತಿಕ್ರಿಯಿಸದ ಹಿನ್ನಲೆ ಪಕ್ಷದ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಅರವಿಂದ್​ ಇಡಿ ಅಧಿಕಾರಿಗಳು ದೆಹಲಿ ಸಿಎಂ ಅವರನ್ನು ಬಂಧಿಸಲಿದೆ. ಈ ಬಗ್ಗೆ ಮೂಲಗಳು ನಮಗೆ ಮಾಹಿತಿ ನೀಡಿವೆ ಎಂದು ಟ್ವೀಟ್​ನಲ್ಲಿ (ಪ್ರಸ್ತುತ ಎಕ್ಸ್​) ವ್ಯಕ್ತಪಡಿಸಿದ್ದರು.

ಹಾಗಾದ್ರೆ ಅರವಿಂದ್ ಕೇಜ್ರಿವಾಲ್ ಬಂಧನ ಖಚಿತವೇ? ಎಂಬ ಗೊಂದಲ ಹುಟ್ಟಿಕೊಂಡ ಬೆನ್ನಲ್ಲೇ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಭುಗಿಲೆದ್ದಿದೆ. ಈ ಸುದ್ದಿಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಇಡಿ, ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲಿನ ದಾಳಿಯ ವರದಿಗಳು ವದಂತಿ ಬಿಟ್ಟರೆ ಬೇರೇನೂ ಅಲ್ಲ! ಇಂದು ಆ ರೀತಿ ಯಾವ ಯೋಜನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net