BBKS10: 'ಎಷ್ಟು ದಿನ ಹೇಳ್ತೀರಾ ಇದನ್ನೇ……'? ಪ್ರತಾಪ್ ಅಳಲಿಗೆ ಇದೇ ಕಾರಣ!

ವಿಜಯವಾಣಿ - 2024-01-04T083658.207
Published on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಹೊಸ ವರ್ಷದ ಸಂಭ್ರವನ್ನು ಮುಗಿಸಿದ ಸ್ಪರ್ಧಿಗಳು ಯಥಾ ಪ್ರಕಾರ ಟಾಸ್ಕ್​ನತ್ತ ಮರಳಿದ್ದಾರೆ. ಇದೀಗ ಫಿನಾಲೆ ಹಂತಕ್ಕೆ ಸಮೀಪದಲ್ಲಿರುವ ಸದಸ್ಯರು ಬಿಗ್ ಬಾಸ್​ ಕೊಡುತ್ತಿರುವ ಸರಳ ಚಟುವಟಿಕೆಯಲ್ಲಿ ತಮ್ಮ ತಾಳ್ಮೆ, ಇಚ್ಚಾಶಕ್ತಿ, ಬುದ್ದಿವಂತಿಕೆ, ದೈಹಿಕ, ಮಾನಸಿಕ ಬಲವನ್ನು ಗಮನದಲ್ಲಿಟ್ಟುಕೊಂಡು ಆಟವಾಡುತ್ತಿದ್ದಾರೆ. ಈ ಪೈಕಿ ಪ್ರತಾಪ್​ಗೆ ಮಾತ್ರ ಅವಕಾಶದ ಕೊರತೆ ಉಂಟಾಗಿದ್ದು, ಇದು ಮನೆಯೊಳಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಈ ವಾರದ ಪ್ರಾರಂಭದಿಂದಲೇ ಮನೆಮಂದಿ ಟಾಸ್ಕ್​ನತ್ತ ಹೆಚ್ಚು ಗಮನಹರಿಸುತ್ತಿದ್ದು, ಮನೆಯ ಕ್ಯಾಪ್ಟನ್ ತನಿಷಾ ಆಯ್ಕೆಯ ಆಧಾರದ ಮೇಲೆ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ರೆ, ಪ್ರತಿ ಟಾಸ್ಕ್​ನಲ್ಲೂ ತನ್ನನ್ನು ಕೈಬಿಡಲಾಗುತ್ತಿದೆ ಎಂದು ಪ್ರತಾಪ್ ಧ್ವನಿ ಎತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಗೀತಾ ಮತ್ತು ಪ್ರತಾಪ್ ನಡುವೆ ಚಿಕ್ಕ ಮಾತಿನ ಚಕಮಕಿ ಕೂಡ ನಡೆಯಿತು.

ಇದೇ ಮನಸ್ತಾಪ ಇಂದಿನ ಹೊಸ ಟಾಸ್ಕ್​ ಆಯ್ಕೆಯ ವಿಚಾರದಲ್ಲೂ ಬುಗಿಲೆದ್ದಿದೆ. ನಮ್ರತಾ ಮತ್ತು ಸಂಗೀತಾ ಕುಳಿತು ಯಾವ ಸ್ಪರ್ಧಿಗಳು ಬೇಕು ಎಂಬ ಲೆಕ್ಕಾಚಾರವನ್ನು ಮಾಡುವಾಗ ಪ್ರತಾಪ್ ಹೆಸರು ಕೇಳಿಬಂದಿದೆ. ಈ ವೇಳೆ ಪ್ರತಾಪ್ ಬೇಡವೆಂದ ಸಂಗೀತಾ, ನೀನು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ, ಗಾಬರಿ ಆಗ್ತೀಯಾ ಎಂದು ಹೇಳಿದ್ದಾರೆ.

ಇದನ್ನು ಆಲಿಸಿದ ಪ್ರತಾಪ್​, ಗಾಬರಿ ಆದ ಅಂತ....ಎಷ್ಟು ದಿನ ಇದನ್ನೇ ಹೇಳ್ತಾರೆ ಅಣ್ಣ ಎಂದು ಅಳುತ್ತ ಕಾರ್ತಿಕ್ ಬಳಿ ಹೇಳಿಕೊಂಡಿದ್ದಾರೆ. ಸದ್ಯ ಪ್ರತಾಪ್​ ಅಳಲು ಮನೆಯಲ್ಲಿ ಏನೆಲ್ಲಾ ಸೃಷ್ಟಿಸಲಿದೆ? ಯಾರ ಮಾತು ಯಾರಿಗೆ ನೋವುಂಟು ಮಾಡಲಿದೆ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net