ಕೌನ್ಸಿಲಿಂಗ್ ಮುಗಿದರೂ ಹೊರಬೀಳದ ಚಲನ ಆದೇಶ: ಶಿಕ್ಷಕರ ನಿತ್ಯ ಪರದಾಟ

IMG_20240911_153024
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 0; AI_Scene: (-1, -1); aec_lux: 132.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 43;
Published on

ರಾಯಚೂರು: ಶಿಕ್ಷಕರ ವರ್ಗಾವಣೆಯಲ್ಲಿ ಮೊದಲಿನಿಂದಲೂ ಅಕ್ರಮದ ಆರೋಪಗಳು ಕೇಳಿ ಬರುತ್ತಿದ್ದು, ವರ್ಗಾವಣೆಯ ಆದೇಶವಾಗಿ ಕೌನ್ಸಿಲಿಂಗ್ ಆದ ನಂತರವೂ ಚಲನ ಆದೇಶ ನೀಡದೇ ಶಿಕ್ಷಕರನ್ನು ಅಲೆದಾಡಿಸುತ್ತಿದ್ದಾರೆ. ಅನಗತ್ಯ ವಿಳಂಬಕ್ಕೆ ಜಿಲ್ಲೆಯ 250 ಕ್ಕೂ ಹೆಚ್ಚಿನ ವರ್ಗಾವಣೆ ಬಯಸಿದ ಶಿಕ್ಷಕರು ಬೇಸತ್ತು ಹೋಗಿದ್ದಾರೆ.

ಜಿಲ್ಲೆಯಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಇದೀಗ ಅತರ್ ಜಿಲ್ಲಾ ವರ್ಗಾವಣೆಗಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಚಲನ ಆದೇಶ ನೀಡದೇ, ಇರುವ ಹುದ್ದೆಗಳಿಂದ ಬಿಡುಗಡೆಗೊಳಿಸದೇ ವಿಳಂಬ ಮಾಡಲಾಗುತ್ತಿದೆ.

ವರ್ಗಾವಣೆಯಲ್ಲಿ ಅಕ್ರಮ ತಡೆಯಲು ಕೌನ್ಸಿಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದರೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದರೂ. ವರ್ಗಾವಣೆ ಮೂವ್‌ಮೆಂಟ್ ಆರ್ಡರ್ ನೀಡದೇ ಶಿಕ್ಷಕರನ್ನು ಅಲೆದಾಡಿಸುತ್ತಿರುವುದು. ವರ್ಗಾವಣೆ ಮಾಡಲು ಅಧಿಕಾರಿಗಳು ಶಿಕ್ಷಕರಿಂದ ಏನನ್ನೋ ನಿರೀಕ್ಷಿಸುತ್ತಿದ್ದಾರೇನೋ ಎಂಬ ಚರ್ಚೆಗಳು ಕೇಳಿಬರುತ್ತಿವೆ.

ವರ್ಗಾವಣೆಗಾಗಿ ಆ.22ಕ್ಕೆ ಕೌನ್ಸಿಲಿಂಗ್ ನಡೆದಿದೆ. ಶಿಕ್ಷಕರನ್ನು ನಿಯೋಜಿಸುವ ಕಾರ್ಯದಲ್ಲಿ ತರಾತುರಿ ಮಾಡಿರುವ ಶಾಲಾ ಶಿಕ್ಷಣ ಇಲಾಖೆ ವರ್ಗಾವಣೆ ವಿಚಾರ ಬಂದಾಗ ಶಿಕ್ಷಕರಿಗೆ ಚಲನ ಆದೇಶ ಹೊರಡಿಸಿ, ಮೊದಲಿರುವ ಹುದ್ದೆಯಿಂದ ಬಿಡುಗಡೆಗೊಳಿಸದೇ ವಿಳಂಬ ತೋರುತ್ತಿದೆ. ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐ ಕಚೇರಿಯಿಂದ ಚಲನ ಆದೇಶಗಳು ಬಂದಿಲ್ಲ ಎಂದು ಹೇಳುತ್ತಿದ್ದು, ವರ್ಗಾವಣೆ ಬಯಸಿದ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ ಅಲೆದಾಟ ತಪ್ಪುತ್ತಿಲ್ಲ.

ಜಿಲ್ಲೆಯಲ್ಲಿ 250ಕ್ಕೂ ಹೆಚ್ಚಿನ ಶಿಕ್ಷಕರು ವರ್ಗಾವಣೆ ಕೌನ್ಸಿಂಗ್ ಅನ್ನು ಪೂರ್ಣಗೊಳಿಸಿದ್ದು, ದೇವದುರ್ಗ ತಾಲೂಕು ಒಂದರಲ್ಲಿಯೇ 30ಕ್ಕೂ ಹೆಚ್ಚಿನ ಶಿಕ್ಷಕರು ವರ್ಗಾವಣೆ ಚಲನ ಆದೇಶ ಬಾರದೇ ಆತಂಕದಲ್ಲಿದ್ದಾರೆ. ದಿನನಿತ್ಯ ವರ್ಗಾವಣೆ ಆದೇಶಕ್ಕಾಗಿ ಅಲೆದಾಡುವ ಶಿಕ್ಷಕರು ಈಗಿರುವ ಹುದ್ದೆಗಳಿಗೆ ಎರಡೆರು ರಜೆಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಏಕ ಕಾಲಕ್ಕೆ ವರ್ಗಾವಣೆ ಬಯಸಿದ ಎಲ್ಲ ಶಿಕ್ಷಕರಿಗೆ ಚಲನ ಆದೇಶ ಹೊರಡಿಸದೇ ಪ್ರತ್ಯೇಕವಾಗಿ ಆದೇಶ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ವರ್ಗಾವಣೆ ವಿಚಾರದಲ್ಲಿ ಇದೀಗ ದಲ್ಲಾಳಿಗಳ ಪಾತ್ರವಿರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದು, ಅಧಿಕಾರಿಗಳ ಈ ನಿರ್ಲಕ್ಷೃತನದಿಂದ ಇಲಾಖೆಗೆ ಕೆಟ್ಟ ಹೆಸರು ಬರುವುದಂತೂ ಸತ್ಯ. ಈಗಲಾದರೂ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡದೇ ಚಲನ ಆದೇಶ ಅತೀ ಶೀಘ್ರದಲ್ಲಿ ಹೊರಡಿಸುವರೇ ಎಂಬುವುದನ್ನು ಕಾದು ನೋಡಬೇಕಾಗಿದೆ.

ಏಕ ಕಾಲದಲ್ಲಿ ಎಲ್ಲ ಶಿಕ್ಷಕರಿಗೆ ಮೂವ್‌ಮೆಂಟ್ ಆರ್ಡರ್ ಮಾಡಿದಾಗ ಶಿಕ್ಷಕರಿಗೆ ತುಂಬಾ ಅನುಕೂಲವಾಗಲಿದೆ. ಇಲಾಖೆಯ ಅಧಿಕಾರಿಗಳು ಪ್ರತ್ಯೇಕವಾಗಿ ಆದೇಶ ನೀಡಿ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. |ಚಂದ್ರಶೇಖರ ರೆಡ್ಡಿ, ಜಿಲ್ಲಾಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಯಚೂರು.

ಇಲಾಖೆಯಿಂದ ಚಲನ ಆದೇಶ ನೀಡಲು ಶಿಕ್ಷಕರನ್ನು ಕಾಯಿಸುತ್ತಿಲ್ಲ. ನಿರಂತರವಾಗಿ ಅರ್ಜಿ ಸಲ್ಲಿಸಿದ ಮರುದಿನವೇ ಆದೇಶ ಹೊರಡಿಸಲಾಗುತ್ತಿದೆ. |ಕೆ.ಡಿ ಬಡಿಗೇರ, ಡಿಡಿಪಿಐ, ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net