ಕರೊನಾ ಗೆದ್ದ ರಾಯಚೂರಿನ 97 ವರ್ಷದ ವೃದ್ದೆ! ಆತ್ಮಸ್ಥೈರ್ಯ ಮುಖ್ಯವೆಂದ ವೈದ್ಯರು

racihuru
Published on

ರಾಯಚೂರು: ಕರೊನಾ ಗೆಲ್ಲುವುದಕ್ಕೆ ಆತ್ಮಸ್ಥೈರ್ಯ ತುಂಬಾ ಮುಖ್ಯ. ಅನೇಕರು ಕರೊನಾ ಬಂದಿತೆಂಬ ಭಯದಿಂದಲೇ ಕಾಯಿಲೆಯನ್ನು ಹೆಚ್ಚು ಮಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಈ ಅಜ್ಜಿ ಹಾಗಲ್ಲ. ಕರೊನಾ ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಧೈರ್ಯವಾಗಿದ್ದ ರಾಯಚೂರಿನ 97 ವರ್ಷದ ವೃದ್ಧೆ ಸೋಂಕು ತಗುಲಿ ಒಂದೇ ವಾರದಲ್ಲಿ ಸೋಂಕು ಮುಕ್ತವಾಗಿದ್ದಾರೆ.


ರಾಯಚೂರಿನ ಮಹಾವೀರ ಚೌಕ್ ಪ್ರದೇಶದ 97 ವರ್ಷದ ವೃದ್ದೆ ಏಪ್ರಿಲ್ 21 ರಂದು ಕೊರೊನಾಕ್ಕೆ ತುತ್ತಾಗಿದ್ದರು. ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸೂಕ್ತ ಚಿಕಿತ್ಸೆ ಪಡೆದ ವೃದ್ಧೆ ಏಪ್ರಿಲ್​ 28ರಂದು ಗುಣಮುಖರಾಗಿ ಮನೆಗೆ ವಾಪಾಸು ಹೋಗಿದ್ದಾರೆ.


ವೃದ್ಧೆ ತನ್ನ ಇಳಿ ವಯಸ್ಸಿನಲ್ಲೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net