

ಧಾರವಾಡ: ಕರೊನಾದ ಎರಡನೇ ಅಲೆ ನೂರಾರು ಜೀವಗಳನ್ನು ಬಲಿ ಪಡೆಯಲಾರಂಭಿಸಿದೆ. ಪಬ್ಲಿಕ್ ಟಿವಿಯ ಆ್ಯಂಕರ್ ಅರುಣ ಬಡಿಗೇರ ತಂದೆ ಮತ್ತು ತಾಯಿ ಇಬ್ಬರೂ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.
ಮೂರು ದಿನಗಳ ಹಿಂದೆ ಅರುಣ್ ಅವರ ತಾಯಿ ಕಸ್ತೂರಮ್ಮ ಬಡಿಗೇರ ಕರೊನಾಕ್ಕೆ ಬಲಿಯಾಗಿದ್ದರು. ಇದೀಗ ಅವರ ತಂದೆ ಚಂದ್ರಶೇಖರ ಬಡಿಗೇರ (68) ಕೂಡ ಸಾವನ್ನಪ್ಪಿದ್ದಾರೆ.
ನಿವೃತ್ತ ಶಿಕ್ಷಕರಾಗಿದ್ದ ಚಂದ್ರಶೇಖರ ಬಡಿಗೇರ ನಗರದ ರೈಟರ್ ಗಲ್ಲಿಯ ನಿವಾಸಿಯಾಗಿದ್ದರು. ಕರೊನಾ ಪೀಡಿತರಾಗಿದ್ದ ಅವರನ್ನು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆಯಾಗದೆ ಮೃತಪಟ್ಟಿದ್ದಾರೆ.