ಗಿಡ ಕಡಿದವರ ವಿರುದ್ಧ ಎಫ್‌ಐಆರ್

raichur forest fir
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
Published on

ರಾಯಚೂರು: ಆ.29ರಂದು ನಗರದ ಯಕ್ಲಾಸಪೂರ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ 20 ಗಿಡಗಳನ್ನು ಕೆಪಿಟಿಸಿಎಲ್ ಸಿಬ್ಬಂದಿ ಕಡಿದು ಹಾಕಿದ್ದರು. ಅರಣ್ಯ ಇಲಾಖೆಯಿಂದ ಗಿಡಗಳನ್ನು ಕಡಿದ ಸಿಬ್ಬಂದಿ ವಿಚಾರಣೆಯೂ ಆಗಿತ್ತು. ಇಲಾಖೆಯಿಂದ ಗಿಡವನ್ನು ಕಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆ.30ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಗಿಡಗಳನ್ನು ಕಡಿದ ಕೆಪಿಟಿಸಿಎಲ್ ಸಿಬ್ಬಂದಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತ ಅರಣ್ಯ ಇಲಾಖೆ ಮರ ಕಡಿದ ಕೆಪಿಟಿಸಿಎಲ್ ಸಿಬ್ಬಂದಿ ಅಬ್ದುಲ್ ಹಾಜೀಜ್, ಸಿರಾಜುದ್ದಿನ್, ಆನಂದ, ಪ್ರಕಾಶ, ಲಕ್ಷ್ಮಣ ಹಾಗೂ ಶಿವಶಂಕರ ಎಂಬ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಜತೆಗೆ ಮುಂಗಡವಾಗಿ 15 ಸಾವಿರ ದಂಡ ಪಾವತಿ ಮಾಡಿಸಿಕೊಂಡಿದ್ದಾರೆ. ಉಳಿದಂತೆ ಪ್ರಕರಣವನ್ನು ಮೇಲಾಧಿಕಾರಿಗಳ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಸರ ಕಾಳಜಿಯಿಂದ ಕೂಡಿದ ವರದಿಯ ಪರಿಣಾಮ ಗಿಡಗಳನ್ನು ನಿಯಮ ಬಾಹೀರವಾಗಿ ಕಡಿದ ಸಿಬ್ಬಂದಿಗೆ ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ 33(2)್ಖ ನಿಯಮ 25(3) ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1969ರ ಕಲಂ 33(3) ನಿಯಮ 43ರನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net