ರಾಯಚೂರು: ಎಲ್‌ಬಿಎಸ್ ನಗರದ ಸಂತೋಷ್‌ನಗರ ಬಡಾವಣೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟ ಜಮೀನಿನಲ್ಲಿ ಅಕ್ರಮವಾಗಿ ಟಿನ್‌ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ವಾರದೊಳಗೆ ಶೆಡ್‌ಗಳನ್ನು ತೆರವುಗೊಳಿಸುವಂತೆ ಡಿಸಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯಿಂದ ಡಿಸಿ ಕೆ.ನಿತೀಶ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿರಿಸಲಾದ 1017 ಚ.ಮೀ ಗೂ ಅಧಿಕ ನಿವೇಶನದಲ್ಲಿ ಟಿನ್‌ಶೆಡ್‌ಗಳನ್ನು ನಿರ್ಮಿಸಲಾಗಿದ್ದು ಜತೆಗೆ ಅದಕ್ಕೆ ದೇವಸ್ಥಾನದ ಸ್ವರೂಪವನ್ನು ನೀಡಿ, ಅತಿಕ್ರಮಿಸಿ ಶಾಲೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗಿದೆ. ಇದರಿಂದ ಶಾಲೆ ನಿರ್ಮಾಣ ಕಾರ್ಯ ಆರಂಭವಾಗದೇ ನೆನಗುದಿಗೆ ಬಿದಿದ್ದೆ ಎಂದರು.
ಇದನ್ನೂ ಓದಿ: ಕುಸಿಯುತ್ತಿವೆ ಕೋಟೆ ಕೊತ್ತಲುಗಳು: ಕಣ್ಮರೆಯಾಗುತ್ತಿದೆ ಇತಿಹಾಸ
ಕಳೆದ ಒಂದು ವರ್ಷದಿಂದ ವಿವಿಧ ಸಂಘಟನೆಗಳು ನಿರಂತರವಾಗಿ ಶಾಲೆ ನಿರ್ಮಾಣಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದು, ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನೂ ಸಲ್ಲಿಸಲಾಗಿದೆ. ಆದರೆ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವುದಾಗಿ ಭರವಸೆ ನಿಡಿದ್ದ ಸಚಿವರು ಅಧಿಕಾರಿಗಳಿಂದ ಈವರೆಗೂ ಯಾವುದೇ ಕ್ರಮವಾಗಿಲ್ಲ ಆದ್ದರಿಂದ ಕೂಡಲೇ ಶೆಡ್‌ಗಳ ತೆರವಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಕಳಸ, ಅಶೋಕ ಕುಮಾರ್ ಜೈನ್, ಶಿವಕುಮಾರ್ ಯಾದವ್, ವೀರೇಶ ಹೀರಾ, ಶಿವಕುಮಾರ ಮ್ಯಾಗಳಮನಿ, ಎಸ್.ನರಸಿಂಹಲು, ಕೆ.ರಂಗನಾಥ, ಇಮ್ರಾನ್ ಬಡೇಸಾಬ್, ಖಲೀಲ್ ಪಾಷಾ, ರಮೇಶ್, ಸಾಧಿಕ್ ಪಾಷಾ, ಹನುಮೇಶ ಅರೋಲಿ, ಫಕ್ರುದ್ದಿನ್ ಅಲಿ, ಜಿ.ನರಸಿಂಹಲು ಸೇರಿದಂತೆ ಇತರರಿದ್ದರು.