ಸಿಬಿಎಸ್‌ಇ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ 'ರಾಹುಲ್ ಸಿಂಗ್‌' ಮುಂದುವರಿಕೆ| rahul-singh

rahul-singh
Published on

ನವದೆಹಲಿ; ಹಿರಿಯ ಅಧಿಕಾರಿ ರಾಹುಲ್ ಸಿಂಗ್ ಅವರಿಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಅಧ್ಯಕ್ಷರಾಗಿ ಎರಡು ವರ್ಷಗಳ ವಿಸ್ತರಣೆ ನೀಡಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

(ಏಜೆನ್ಸೀಸ್)

1996 ರ ಬ್ಯಾಚ್‌ನ ಬಿಹಾರ ಕೇಡರ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿ ರಾಹುಲ್ ಸಿಂಗ್ ಅವರನ್ನು ಕಳೆದ ವರ್ಷ ಮಾರ್ಚ್ 13 ರಂದು ಈ ಹುದ್ದೆಗೆ ನೇಮಿಸಲಾಯಿತು. ರಾಹುಲ್ ಸಿಂಗ್ ಅವರು ಮಾರ್ಚ್‌ನಲ್ಲಿ ಸಿಬಿಎಸ್‌ಇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಸಿಂಗ್ ಅವರ ಕೇಂದ್ರ ನಿಯೋಜನೆಯ ಅಧಿಕಾರಾವಧಿಯನ್ನು ನವೆಂಬರ್ 11, 2025 ರಿಂದ ಎರಡು ವರ್ಷಗಳ ಅವಧಿಗೆ ಅಂದರೆ ನವೆಂಬರ್ 11, 2027 ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net