'ಬಿಗ್‌ ಬಾಸ್‌'ನಲ್ಲಿ ಸ್ಪರ್ಧಿಸಲು 6 ಕೋಟಿ ಆಫರ್; ರಿಜೆಕ್ಟ್ ಮಾಡಿದ ನಟಿ; ಕಾರಣ ಏನಿರಬಹುದು.?bigg-boss

Elnaz Norouzi
Published on

bigg-boss : ಬಿಗ್​ಬಾಸ್​ ರಿಯಾಲಿಟಿ ಕಾರ್ಯಕ್ರಮವನ್ನು ಇಷ್ಟಪಡುವವರು ಎಷ್ಟೋ ಮಂದಿ ಇದ್ದಾರೆ. ಇನ್ನೂ ಈ ಕಾರ್ಯಕ್ರಮಕ್ಕೆ ಹೋಗಲೇಬೇಕೆಂಬುದು ಹಲವರ ಬೇಡಿಕೆಯಾಗಿದೆ. ಇದೆಲ್ಲದರ ಮದ್ಯೆ ಖ್ಯಾತ ನಟಿ, ಎಲ್ನಾಜ್ ನೊರೌಜಿ 6 ಕೋಟಿ ರೂಪಾಯಿಗಳ ಬೃಹತ್ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.

ಅವರಿಗೆ ಈಗಾಗಲೇ ಕೈತುಂಬಾ ಕೆಲಸಗಳು ಇರುವ ಕಾರಣ ಕೊಟ್ಟಿರೋ ನಟಿ, ಮನಸ್ಸು ಮಾಡಿದ್ದರೆ 6 ಕೋಟಿ ಪಡೆದು ಬಿಗ್​ಬಾಸ್​ಗೆ ಹೋಗಬಹುದಿತ್ತು. ಆದರೆ ಈ ಷೋಗೆ ನಾನು ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಸಿನಿಮಾ ಪ್ರಯಾಣದ ಮೇಲೆ ಗಮನಹರಿಸಿದ್ದಾರೆ. ಬಿಗ್​ಬಾಸ್​ನಂಥಹ ಕಾರ್ಯಕ್ರಮಕ್ಕೆ ಹೋಗಿ ನನ್ನ ಸಿನಿಮಾದ ಜೀವನದ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಟಿ ಹೇಳಿರುವುದಾಗಿ ತಿಳಿದುಬಂದಿದೆ.

ಬಿಗ್ ಬಾಸ್‌ನ ಹೊಸ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಅನೇಕ ಸೆಲೆಬ್ರಿಟಿಗಳ ಹೆಸರುಗಳು ಹರಿದಾಡುತ್ತಿವೆ. ಇದರಲ್ಲಿ ಎಲ್ನಾಜ್ ನೊರೌಜಿ ಅವರನ್ನು ಈಗ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಸಂಪರ್ಕಿಸಲಾಗಿತ್ತು, ಆದರೆ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಜರ್ಮನ್‌ನ ಖ್ಯಾತ ನಟಿ ಎಲ್ನಾಜ್‌ ನೊರೌಜಿ ಪ್ರಸ್ತುತ ʻಮಸ್ತಿ 4’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ʻಬಿಗ್‌ ಬಾಸ್‌ 19ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಅವರು ನಿರಾಕರಿಸಿದ್ದಾರೆ. ಎಲ್ನಾಜ್‌ ನೊರೌಜಿ ಅವರು ಅಮೇಜಾನ್‌ ಪ್ರೈಮ್‌ನ ದಿ ಟ್ರೈಟರ್ಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

(ಏಜೆನ್ಸೀಸ್)

ಸಲ್ಮಾನ್‌ ಖಾನ್‌ ʻಬಿಗ್‌ ಬಾಸ್‌ ಸೀಸನ್‌ 19ʼರೊಂದಿಗೆ ಮರಳುತ್ತಿದ್ದಾರೆ. ಈ ಸೀಸಸ್‌ನ ಪ್ರೋಮೋ ಕೂಡ ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ. ಆದರೆ ಯಾರೆಲ್ಲಾ ಸ್ಪರ್ಧಿಗಳಾಗಿ ಬರ್ತಿದ್ದಾರೆ ಅನ್ನೋದನ್ನ ಬಹಿರಂಗಪಡಿಸಿಲ್ಲ. ಆದರೆ, ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಓಡಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net