'ರಾಹುಲ್​ ಗಾಂಧಿ ದಲಿತ ಯುವತಿಯನ್ನೇ ಮದುವೆಯಾಗಬೇಕು' ರಾಹುಲ್​ ಮದುವೆಗೆ 2.5 ಲಕ್ಷ ಕೊಡಲು ಸಿದ್ಧವಾದ ಸಚಿವ

rahul gandhi
Published on

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಮದುವೆ ವಿಚಾರ ಆಗಾಗ ಚರ್ಚೆಗೆ ಬಂದು ಹೋಗುತ್ತಿರುತ್ತದೆ. ಇದೀಗ ಮತ್ತೊಮ್ಮೆ ಅವರ ಮದುವೆ ಪ್ರಸ್ತಾಪ ಬಂದಿದೆ. ರಾಹುಲ್​ ಗಾಂಧಿಯವರು ದಲಿತ ಯುವತಿಯನ್ನೇ ಮದುವೆಯಾಗಬೇಕು ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.

ಹಮ್​ ದೋ ಹಮಾರೆ ದೋ ಎನ್ನುವ ವಾಕ್ಯವನ್ನು ಕುಟುಂಬಕ್ಕೆ ಹೇಳಲಾಗುತ್ತಿತ್ತು. ಇದೀಗ ರಾಹುಲ್​ ಗಾಂಧಿಯವರು ಈ ಘೋಷಣೆಯನ್ನು ಪ್ರಚಾರ ಮಾಡಲು ಬಯಸುವುದಾದರೆ ಮೊದಲು ಅವರು ಮದುವೆಯಾಗಬೇಕು. ಅದೂ ದಲಿತ ಯುವತಿಯನ್ನೇ ಮದುವೆಯಾಗಬೇಕು. ಆಗ ಅವರು ಜಾತಿವಾದವನ್ನು ತೊಡೆದುಹಾಕಿ ಗಾಂಧಿಜೀಯವರ ಕನಸು ನನಸು ಮಾಡಿದಂತೆ ಆಗುತ್ತದೆ. ಇದರಿಂದ ಸಾಕಷ್ಟು ಯುವಕರೂ ಪ್ರೇರೇಪಿತರಾಗಲಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಹೇಳಿದ್ದಾರೆ.

ರಾಹುಲ್​ ಗಾಂಧಿಯವರು ದಲಿತ ಯುವತಿಯನ್ನು ಮದುವೆಯಾದರೆ, ಅಂತರ್ಜಾತಿ ವಿವಾಹ ಯೋಜನೆಯಲ್ಲಿ ಅವರಿಗೆ 2.5 ಲಕ್ಷ ರೂಪಾಯಿ ಕೊಡುವುದಾಗಿ ಅವರು ಹೇಳಿದ್ದಾರೆ.

ಜಾರ್ಖಂಡ್​ನ್ನು ಅಭಿವೃದ್ಧಿಯತ್ತ ತೆಗೆದುಕೊಂಡುಹೋಗಬೇಕೆಂದರೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕರಾದ ಶಿಬು ಸೊರೆನ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿಯಾಗಿರುವ ಹೇಮಂತ್ ಸೊರೆನ್ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ ಸೇರಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net