More

    ವೈರಲ್​ ಆಯ್ತು ರಾಹುಲ್​ ಫಿಟ್​ನೆಸ್​ ಫೋಟೋ: ನೆಟ್ಟಿಗರಿಂದ ಪ್ರಶ್ನೆಗಳ ಜತೆ ಮೆಚ್ಚುಗೆಯ ಮಹಾಪೂರ!

    ನವದೆಹಲಿ: ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿಯ ‘ಆಬ್ಸ್‌’ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಫೆ.24ರಂದು ಸಮುದ್ರದಲ್ಲಿ ಈಜುವ ಮೂಲಕ ರಾಗಾ ಭಾರಿ ಸುದ್ದಿಯಾಗಿದ್ದರು. ಅದೇ ವೇಳೆ ತೆಗೆದಿರುವ ರಾಹುಲ್ ಫೋಟೋ ಇದೀಗ ಜಾಲತಾಣದಲ್ಲಿ​ ಸಂಚಲನ ಸೃಷ್ಟಿಸಿದೆ.

    ವೈರಲ್​ ಆಗಿರುವ ಫೋಟೋದಲ್ಲಿ ರಾಹುಲ್​ ಅವರ “ಸಿಕ್ಸ್​ಪ್ಯಾಕ್ಟ್​ ಆ್ಯಬ್ಸ್” ಒದ್ದೆಯಾದ ಟೀ-ಶರ್ಟ್​ ಮೇಲೆಯೇ ಮಂಕಾಗಿ ಕಾಣಿಸುತ್ತದೆ. ಇದೀಗ ಕಾಂಗ್ರೆಸ್​ ನಾಯಕನಿಗೆ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಲಾಕ್​ಡೌನ್​ ಸಮಯದಲ್ಲಿ ಅನೇಕರು ತೂಕ ಹೆಚ್ಚಿಸಿಕೊಂಡಿದ್ದರೆ, ರಾಹುಲ್​ ತಮ್ಮ ಜಿಮ್ ಅವಧಿಯನ್ನು ಮಿಸ್​ ಮಾಡೇ ಇಲ್ಲ ಎಂದು ಪ್ರಶಂಸಿಸಿದ್ದಾರೆ. ​

    ಅನೇಕರು ರಾಹುಲ್​ ಬಳಿ ಫಿಟ್​ನೆಸ್​ ಸಲಹೆಯನ್ನು ಕೇಳಿದ್ದಾರೆ. ಇನ್ನು ಕೆಲವರು ರಾಗಾ ದೇಶದ ಅತ್ಯಂತ ಫಿಟ್​ ನಾಯಕನೆಂದು ಕೊಂಡಾಡಿದ್ದಾರೆ. ರಾಜಕೀಯ ವ್ಯಕ್ತಿಗಳೆಂದರೆ ಬಹುತೇಕರು ಹೊಟ್ಟೆ ಬಿಟ್ಟುಕೊಂಡು ಇರುತ್ತಾರೆ. ಅವರಿಗೆಲ್ಲ ರಾಹುಲ್​ ಮಾದರಿ ಎಂದಿದ್ದಾರೆ.

    ಇದನ್ನೂ ಓದಿರಿ: ಪತ್ನಿ ಮುಖ ನೋಡಿ ಮುಜುಗರಕ್ಕೊಳಗಾಗಿ ಆರೋಪಿ ಆತ್ಮಹತ್ಯೆ ಪ್ರಕರಣ: ಪಿಎಸ್​ಐ ಸಸ್ಪೆಂಡ್​!

    ಕಾಂಗ್ರೆಸ್​ ಮಾಜಿ ಸಂಸದ ಮತ್ತು ಸಚಿವ ರಾಜೀವ್​ ಶುಕ್ಲಾ ಟ್ವೀಟ್​ ಮಾಡಿ ರಾಹುಲ್​ ಆ್ಯಬ್ಸ್​ ಹೊಂದಿದ್ದಾರೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಗಾ ಆ್ಯಬ್ಸ್​ ಬಾಕ್ಸರ್​ ಆ್ಯಬ್ಸ್​ ಎಂದು ಬಾಕ್ಸಿಂಗ್​ ಚಾಂಪಿಯನ್​ ವಿಜಯೇಂದರ್​ ಸಿಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕರು ರಾಹುಲ್​ ಫಿಟ್​ನೆಸ್​ ನೋಡಿ ಫಿದಾ ಆಗಿದ್ದು, ತಮ್ಮದೇ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

    ಅಂದಹಾಗೆ ರಾಹುಲ್​ ಫೆ. 24ರಂದು ಕೇರಳದ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಎರಡು ದಿನಗಳ ಪ್ರವಾಸದ ನಡುವೆಯೇ ಮೀನುಗಾರರ ಜತೆ ಉತ್ತಮ ಕ್ಷಣಗಳನ್ನು ಕಳೆದ ರಾಗಾ ಅವರೊಂದಿಗೆ ಸಮುದ್ರಕ್ಕೆ ಜಿಗಿದು ಈಜುವ ಮೂಲಕ ಎಲ್ಲರ ಹುಬ್ಬೇರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಭಾರಿ ವೈರಲ್​ ಆಗಿ, ತುಂಬಾ ಮೆಚ್ಚುಗೆ ವ್ಯಕ್ತವಾಯಿತು. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ

    ‘ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ’ ಲಸಿಕಾ ಕೇಂದ್ರದ ಆಯ್ಕೆ ನಿಮ್ಮದು ಎಂದು ಆರೋಗ್ಯ ಇಲಾಖೆ

    2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts