ರಾಹುಲ್ ಗಾಂಧಿ ಜೊತೆ ತೇಜಸ್ವಿ ಯಾದವ್​ ಬುಲೆಟ್​ ರೈಡ್​ ; ಸಹೋದರ ತೇಜ್ ಪ್ರತಾಪ್ ಕಿಡಿ​ !| Bullet ride

Rahul Gandhi, Tejashwi Yadav Bullet ride
Published on

Bullet ride: ಬಿಹಾರದ ಪೂರ್ಣಿಯಾದಲ್ಲಿ 16 ದಿನಗಳ 'ಮತದಾರ ಅಧಿಕಾರ ಯಾತ್ರೆ' ಅಭಿಯಾನವನ್ನು ಮುಂದುವರೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ (ಆಗಸ್ಟ್​ 24) ಬುಲೆಟ್ ಸವಾರಿ ನಡೆಸಿರುವುದನ್ನು ತೇಜಸ್ವಿ ಸಹೋದರ ತೇಜ್​ ಪ್ರತಾಪ್​ ಟೀಕಿಸಿದ್ದಾರೆ.

ಚುನಾವಣೆಯ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು, ನಾವು ಬೇರೆ ನಾಯಕರಂತೆ ಹೆಲಿಕಾಪ್ಟರ್‌ಗಳಲ್ಲಿ ಹಾರುವುದಿಲ್ಲ. ಇವರು ಹವಾನಿಯಂತ್ರಿತ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಕೈಕುಲುಕಲು ಇವರಿಂದ ಸಾಧ್ಯವಿಲ್ಲ ಆದರೂ ತಮ್ಮನ್ನು ತಾವೂ ಜನ ನಾಯಕರೆಂದು ಹೇಳಿಕೊಂಡು ತಿರುಗಾಡುತ್ತಾರೆ ಎಂದರು.

ತಾವೂ ನೆಲದ ಸಂಪರ್ಕ ಹೊಂದಿರುವ ನಾಯಕರಾಗಲು ಬಯಸುತ್ತೇವೆ ಎಂದಿರುವ ತೇಜ್​, ನಿಜವಾದ ಎರಡನೇ ಲಾಲು ಯಾರೆಂದು ಬಿಹಾರದ ಜನರಿಗೆ ಈಗಾಗಲೇ ತಿಳಿದಿದೆ ಎಂದರು.

ಬಿಜೆಪಿ ಕಿಡಿ

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೋಡಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿದ್ದರೆ. ಮತ್ತೊಂದೆಡೆ, ಚಿನ್ನದ ಚಮಚಗಳೊಂದಿಗೆ ಜನಿಸಿದ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಪ್ರಧಾನಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net