ಭಾರತದ ಗಡಿ ಬಳಿ 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ ಬಿಎಸ್​ಎಫ್​| Pak Fishermen

BSF
Published on

Pak Fishermen; ಗುಜರಾತ್​ನ ಕಚ್​ ಜಿಲ್ಲೆಯ ಭಾರತ -ಪಾಕಿಸ್ತಾನ್ ಗಡಿಯಲ್ಲಿ ಶನಿವಾರ 15 ಪಾಕ್ ಮೀನುಗಾರರನ್ನು ಗಡಿ ಭದ್ರತಾ ಪಡೆ(ಬಿಎಸ್​ಎಫ್​) ಬಂಧಿಸಿದ್ದು, ಇಂಜಿನ್​ ಅಳವಡಿಸಿದ್ದ ದೋಣಿಯನ್ನು ವಶಪಡಿಕೊಂಡಿದೆ ಎಂದು ಭಾನುವಾರ(ಆಗಸ್ಟ್ 23) ವರದಿಯಾಗಿದೆ.

ನಿಖರ ಗುಪ್ತಚರ ಮಾಹಿತಿಯ ಮೇರೆಗೆ ಬಿಎಸ್‌ಎಫ್ 68 ನೇ ಬೆಟಾಲಿಯನ್ ಸಿಬ್ಬಂದಿ ಗಡಿ ಹೊರಠಾಣೆ ಬಳಿಯ ಕೋರಿ ಕ್ರೀಕ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.ಈ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಸಿಂಧ್‌ನ ಸುಜಾವಾಲ್ ಜಿಲ್ಲೆಯ ಮೀನುಗಾರರನ್ನು ಅವರ ದೋಣಿಯೊಂದಿಗೆ ಬಂಧಿಸಿದ್ದಾರೆ ವರದಿಗಳು ಉಲ್ಲೇಖಿಸಿವೆ.

ವಶಪಡಿಸಿಕೊಂಡ ದೋಣಿಯಲ್ಲಿ 60 ಕೆಜಿ ಮೀನು, ಒಂಬತ್ತು ಮೀನುಗಾರಿಕಾ ಬಲೆಗಳು, ಡೀಸೆಲ್, ಆಹಾರ ಸಾಮಗ್ರಿಗಳು, ಐಸ್, ಮರದ ಕೋಲುಗಳು, ಒಂದು ಮೊಬೈಲ್ ಫೋನ್ ಹಾಗೂ 200 ರೂ. ನೋಟಿನ ಪಾಕಿಸ್ತಾನಿ ಕರೆನ್ಸಿ ಸಾಗಿಸಲಾಗುತ್ತಿತ್ತು. ಭಾರತೀಯ ಜಲಪ್ರದೇಶದಲ್ಲಿ ಮೀನುಗಾರರು ಇರುವುದರ ಹಿಂದಿನ ಉದ್ದೇಶವನ್ನು ಬಿಎಸ್‌ಎಫ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net