ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾದರು ಪ್ರಧಾನಿ ಮೋದಿ ಮೌನವೇಕೆ?; ರಾಹುಲ್​ ಗಾಂಧಿ ಕಿಡಿ

1 Min Read
ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾದರು ಪ್ರಧಾನಿ ಮೋದಿ ಮೌನವೇಕೆ?; ರಾಹುಲ್​ ಗಾಂಧಿ ಕಿಡಿ

ನವದೆಹಲಿ: ನೀಟ್​ ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಮಯದಲ್ಲಿ 0.001ರಷ್ಟು ನಿರ್ಲಕ್ಷ್ಯ ಯಾರದ್ದಾದರೂ ಇದ್ದರೆ ಅದನ್ನು ನಿಭಾಯಿಸಬೇಕು ಎಂದು ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಅನ್ನು ಸುಪ್ರೀಂಕೋರ್ಟ್ ಎಳೆದ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರ ವಾಗ್ದಾಳಿ ನಡೆಸಿದ್ದಾರೆ. ನೀಟ್​ ಯುಜಿ 2024ರ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನು ಓದಿ: ಒಂದು ಸಣ್ಣ ತಪ್ಪು ಸರ್ಕಾರವನ್ನು ಪತನಗೊಳಿಸಬಹುದು ಎಂದಿದ್ದೇಕೆ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ

ನೀಟ್ ಪರೀಕ್ಷೆಯ ಹಗರಣದಿಂದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತಿರುವ ವಿಷಯದ ಬಗ್ಗೆ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿನ ಆಗಿರುವ ಬಂಧನಗಳು ಪರೀಕ್ಷಾ ಪ್ರಕ್ರಿಯೆಯಲ್ಲಿ ಯೋಜಿತ ಮತ್ತು ಸಂಘಟಿತ ಭ್ರಷ್ಟಾಚಾರ ನಡೆದಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಪ್ರಶ್ನೆಪತ್ರಿಕೆ ಸೋರಿಕೆಯ ಕೇಂದ್ರಬಿಂದುವಾಗುತ್ತಿವೆ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್​​ ಖಾತೆಯಲ್ಲಿ ಮಾಡಿರುವ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾದರು ಪ್ರಧಾನಿ ಮೋದಿ ಮೌನವೇಕೆ?; ರಾಹುಲ್​ ಗಾಂಧಿ ಕಿಡಿ

ನಮ್ಮ ಪ್ರಣಾಳಿಕೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಯುವಕರ ಭವಿಷ್ಯದ ರಕ್ಷಣೆಯನ್ನು ಖಾತರಿಪಡಿಸಿದ್ದೇವೆ. ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ಪೂರೈಸುತ್ತಾ, ಸಂಸತ್ತಿನಲ್ಲಿ ದೇಶಾದ್ಯಂತ ಯುವಜನರ ಧ್ವನಿಯಾಗಿ ಅಂತಹ ಕಠಿಣ ನೀತಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​​)

ಅಪರಾಧ ಕೃತ್ಯಗಳನ್ನು ವೈಭವೀಕರಿಸುತ್ತಾ ಮಕ್ಕಳು ಬೆಳೆಯಬಾರದು; ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

See also  ಹಬ್ಬದಲ್ಲೂ ರಾಜಕೀಯ; ರಾವಣನ ಪ್ರತಿಕೃತಿಗೆ ಮೋದಿ ಫೋಟೋ ಅಂಟಿಸಿ ದಹನ..
Share This Article