VIDEO | ನಾವು ರಿಮೋಟ್ ಒತ್ತಿದಾಗ ಬಡವರು ಯೋಜನೆಗಳ ಲಾಭ ಪಡೆಯುತ್ತಾರೆ; ಇದೇ ಬಿಜೆಪಿ ಒತ್ತಿದರೆ…: ರಾಹುಲ್​ ಗಾಂಧಿ

Untitled design - 2023-09-25T153447.158
Published on

ಛತ್ತೀಸ್‌ಗಢ: ಮುಂಬರುವ ಚುನಾವಣಾ ಹಿನ್ನೆಲೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದ ಕಾಂಗ್ರೆಸ್​ ರ್ಯಾಲಿಯಲ್ಲಿ ಭಾಗವಹಿಸಿದ ರಾಹುಲ್​ ಗಾಂಧಿ, ಸಿಎಂ ಭೂಪೇಶ್ ಬಘೇಲ್ ಅವರೊಂದಿಗೆ ಮುಖ್ಯಮಂತ್ರಿ ಗ್ರಾಮೀಣ ಆವಾಸ್ ನ್ಯಾಯ್ ಯೋಜನೆ (MGANY) ಪ್ರಾರಂಭಿಸುವ ಮೊದಲು ಫಲಾನುಭವಿಗಳನ್ನು ಭೇಟಿ ಮಾಡಿ ಮಾತನಾಡಿದರು.

ಬಿಲಾಸ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ, "ಹಿಂದಿನ ಚುನಾವಣೆಗಳಲ್ಲಿ ಛತ್ತೀಸ್‌ಗಢದ ಅಡಿಪಾಯವನ್ನು ಬಲಪಡಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದೆವು. ಆ ಭರವಸೆಗಳನ್ನು ನಾವು ಈಡೇರಿಸಿದ್ದೇವೆ" ಎಂದು ಹೇಳಿದರು.

"ನಾವು ರಿಮೋಟ್ ಅನ್ನು ಒತ್ತಿದಾಗ (ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಾರಂಭಿಸುವಾಗ) ಬಡವರು ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಆದ್ರೆ, ಅದೇ ಬಿಜೆಪಿ ಇದನ್ನು ಮಾಡಿದಾಗ, ಅದಾನಿಗೆ ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ ಒಪ್ಪಂದಗಳು, ಮೂಲಸೌಕರ್ಯ ಯೋಜನೆಗಳನ್ನು ಪಡೆಯುತ್ತಾರೆ ಮತ್ತು ಸಾರ್ವಜನಿಕ ವಲಯವು ಖಾಸಗೀಕರಣಗೊಳ್ಳುತ್ತದೆ" ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net