'ಒಂದು ರಾಷ್ಟ್ರ, ಒಂದು ಚುನಾವಣೆ' ಭಾರತೀಯ ಒಕ್ಕೂಟದ ಮೇಲೆ ದಾಳಿ: ರಾಹುಲ್ ಗಾಂಧಿ

rahul gandhi
Published on

ನವದೆಹಲಿ: ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಶೀಘ್ರವಾಗಿ ಪರಿಶೀಲಿಸಿ ಶಿಫಾರಸು ಮಾಡಲು 8 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಈ ಕುರಿತಾಗಿ ರಾಹುಲ್​​ ಗಾಂಧಿ ಕಾಂಗ್ರೆಸ್ ಪಕ್ಷದ ಅಭಿಪ್ರಾಯವನ್ನು​​ ಸ್ಪಷ್ಟಪಡಿಸಿದ್ದಾರೆ.

ಒಂದು ದೇಶ-ಒಂದು ಚುನಾವಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ. 'ಭಾರತ.. ಅಂದರೆ ಭಾರತ.. ರಾಜ್ಯಗಳ ಒಕ್ಕೂಟ. ಒಂದು ದೇಶ-ಒಂದು ಚುನಾವಣೆಯ ಕಲ್ಪನೆಯು ನಮ್ಮ ರಾಷ್ಟ್ರೀಯ ಒಕ್ಕೂಟ ಮತ್ತು ರಾಜ್ಯಗಳ ಮೇಲಿನ ದಾಳಿಯಾಗಿದೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಫೆಡರಲ್ ಮತ್ತು ಏಕ ಕೇಂದ್ರೀಯ ವ್ಯವಸ್ಥೆಗಳ ಸಂಯೋಜನೆಯಾದ ಭಾರತದಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಚುನಾವಣೆಗಳು ಏಕಕಾಲದಲ್ಲಿ ನಡೆದರೆ ಅನೇಕ ಪ್ರಯೋಜನಗಳಿವೆ ಎಂದು ಬಿಜೆಪಿ ಹೇಳುತ್ತದೆ. ಒನ್ ನೇಷನ್-ಒನ್ ಎಲೆಕ್ಷನ್ ಕಲ್ಪನೆ ಬಹಳ ಹಿಂದಿನಿಂದಲೂ ಇದೆ. ಕೇಂದ್ರ ಸರ್ಕಾರ ಈಗಾಗಲೇ ಈ ವ್ಯವಸ್ಥೆಯಡಿ ಚುನಾವಣೆಗೆ ಸಮಿತಿಯನ್ನು ನೇಮಿಸಿದೆ.

ಈ ಸಮಿತಿಯ ಅಧ್ಯಕ್ಷರಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯಲ್ಲಿ ಅಮಿತ್ ಶಾ, ಅಧೀರ್ ರಂಜನ್ ಚೌಧರಿ, ಎನ್ ಕೆ ಸಿಂಗ್, ಹರೀಶ್ ಸಾಳ್ವೆ, ಸುಭಾಷ್, ಸಂಜಯ್ ಕೊಠಾರಿ ಮತ್ತು ಗುಲಾಂ ನಬಿ ಆಜಾದ್ ಇದ್ದಾರೆ.

ಸಂಸತ್ ಅಧಿವೇಶನ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಈ ಸಭೆಗಳಲ್ಲಿಯೇ ಕೇಂದ್ರ ಸರ್ಕಾರವು ಒಂದು ದೇಶ-ಒಂದು ಚುನಾವಣೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸಲು ಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net