Rahul Gandhi Counter: 'ರೈತರ ಸಾವಿಗೆ ಪ್ರಧಾನಿ ಮೋದಿ ಎರಡು ನಿಮಿಷ ಮೌನ ವಹಿಸಲಿಲ್ಲ': ಕಂಗನಾ ಕ್ಷಮೆಯಾಚನೆಗೆ ರಾಹುಲ್​ ಕೌಂಟರ್​

Rahul Gandhi
Published on: 

ನವದೆಹಲಿ: ಏಳುನೂರು ರೈತರ ಸಾವಿಗೆ ಪ್ರಧಾನಿ ಎರಡು ನಿಮಿಷ ಮೌನ ವಹಿಸಲಿಲ್ಲ ಎಂದು ಸಂಸದೆ ಕಂಗನಾ ರಾನೌತ್​ ಕ್ಷಮೆಯಾಚನೆಗೆ ಲೋಕಸಭೆ ವಿರೋಧ ಪಕ್ಷ ನಾಯಕ ಹಾಗೂ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ತಿರುಗೇಟು(Rahul Gandhi Counter) ನೀಡಿದ್ದಾರೆ.

ಕಂಗನಾ ರನೌತ್ ಬುಧವಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯಿಸಿದ್ದು, ಬಳಿಕ ತನ್ನ ಮಾತನ್ನು ಹಿಂತೆಗೆದುಕೊಂಡರು. ಅಷ್ಟೇ ಅಲ್ಲ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಕಂಗನಾ ಹೇಳಿಕೆಯ ನಂತರ, ವಿರೋಧ ಪಕ್ಷವು ನಟಿ-ರಾಜಕಾರಣಿಯ ಹೇಳಿಕೆಗಳನ್ನು ಆಡಳಿತ ಪಕ್ಷವು ಒಪ್ಪದಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿತು. ರಾಹುಲ್ ಗಾಂಧಿ ಕೂಡ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ವಾಗ್ಧಾಳಿ ನಡೆಸಿದರು.

ಈ ವಿಚಾರದಲ್ಲಿ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಜೆಪಿಗೆ ತೃಪ್ತಿ ತಂದಿಲ್ಲ: Rahul Gandhi Counter

ಇದರಲ್ಲಿ ಸರ್ಕಾರದ ನೀತಿಯನ್ನು ನಿರ್ಧರಿಸುವವರು ಯಾರು? ಬಿಜೆಪಿ ಸಂಸದರೋ ಅಥವಾ ಪ್ರಧಾನಿ ಮೋದಿಯೋ? ವಿಶೇಷವಾಗಿ ಹರಿಯಾಣ ಮತ್ತು ಪಂಜಾಬ್‌ನ 700 ಕ್ಕೂ ಹೆಚ್ಚು ರೈತರ ಹುತಾತ್ಮತೆಯಿಂದ ಬಿಜೆಪಿ ಜನರಿಗೆ ತೃಪ್ತಿಯಾಗಲಿಲ್ಲ. ಇನ್ನೂ ಎಷ್ಟು ಅನ್ನದಾತರ ಬಲಿ ಬೇಕು ಎಂದು ಪ್ರಶ್ನಿಸಿದ್ದಾರೆ.