ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣ: ನಟಿ ರಾಗಿಣಿ, ಸಂಜನಾ ಸೇರಿ ಹಲವರ ಡ್ರಗ್ಸ್ ಸೇವನೆ ಖಚಿತ

sanjana-ragini
Published on

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಈ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರಾಗಿಣಿ, ಸಂಜನಾ ಸೇರಿ ಹಲವರು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ.

ಹೇರ್ ಫಾಲೀಕ್ ಟೆಸ್ಟ್​ನಲ್ಲಿ ಡ್ರಗ್ಸ್ ಸೇವನೆ‌ ಮಾಡಿರುವುದು ಖಚಿತವಾಗಿದೆ. ರಾಗಿಣಿ ಮತ್ತು ಸಂಜನಾ ಸೇರಿ ಹಲವರ ಕೂದಲು ಸ್ಯಾಂಪಲ್​ ಅನ್ನು ಹೈದರಾಬಾದ್​ನ FSLಗೆ ಸಿಸಿಬಿ ಕಳುಹಿಸಿತ್ತು. ಸಿಸಿಬಿ ಕಳೆದ 1 ವರ್ಷದಿಂದ ರಿಪೋರ್ಟ್​ಗಾಗಿ ಕಾದು ಕುಳಿತ್ತಿತ್ತು. ಸದ್ಯ FSL ಅಧಿಕೃತ ವರದಿ ಸಿಸಿಬಿ ಕೈ ಸೇರಿದ್ದು, ಈ ವರದಿಯಲ್ಲಿ ನಟಿಮಣಿಯರು ಸೇರಿ ಹಲವರು ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ.

ಪಾರ್ಟಿ ಆಯೋಜಕ ವಿರೇನ್ ಖನ್ನಾ, ರವಿಶಂಕರ್, ರಾಗಿಣಿ , ಸಂಜನಾ ಮತ್ತು ಪೆಡ್ಲರ್ ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.

ಕಳೆದ 1 ವರ್ಷದ ಅವಧಿಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಗಳ ಹೇರ್ ಸ್ಯಾಂಪಲ್ ಪರೀಕ್ಷೆ ನಡೆದಿತ್ತು. ಇದೀಗ ಹಲವು ಆರೋಪಿಗಳ ಡ್ರಗ್ ಸೇವಿಸಿರುವುದು ಧೃಡವಾಗಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದರು. ಒಂದು ವೇಳೆ ಬಂಧಿಸಿದ್ರೆ ಡ್ರಗ್ಸ್ ಸೇವನೆ ಬಗ್ಗೆ ಕುರುಹು ಸಿಗಲ್ಲ ಅಂತಾ ಸ್ವಲ್ಪ ದಿನ ತಲೆಮರೆಸಿಕೊಳ್ಳುತ್ತಿದ್ರು. ಆದ್ರೆ ಸಿಸಿಬಿ ಹೊಸ ರೀತಿಯಲ್ಲಿ ತನಿಖೆಗೆ ಮುಂದಾಗಿತ್ತು. ಹೀಗಾಗಿಯೇ ಹೆರ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು‌. ಈ ಹಿಂದೆ ಡ್ರಗ್ಸ್ ಪ್ರಕರಣಗಳಲ್ಲಿ ರಕ್ತ, ಮೂತ್ರ ಪರೀಕ್ಷೆ ಮಾತ್ರ ಮಾಡಲಾಗ್ತಿತ್ತು. ಆದ್ರೆ ಮೊದಲ ಬಾರಿಗೆ ಆರೋಪಿಗಳ ಹೆರ್ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ವರದಿ ಬಂದಿದ್ದು, ಆರೋಪಿಗಳ ಡ್ರಗ್ಸ್ ಸೇವನೆ ಧೃಡವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net